ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಈ ಬಾರಿ ದೊಡ್ಡ ಮಟ್ಟದಲ್ಲಿ ಕಮಲವನ್ನು ಅರಳಿಸಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಅದಕ್ಕೆ ಕೇಂದ್ರ ನಾಯಕರೆಲ್ಲಾ ಬಂದು ಮಂಡ್ಯಗೊಮ್ಮೆ ವಿಸಿಟ್ ಕೊಟ್ಟು ಹೋಗುತ್ತಿದ್ದಾರೆ. ಜೊತೆಗೆ ಹೊಸ ಹೊಸ ಸ್ಟಾಟರ್ಜಿ ಪ್ರಯೋಗ ಮಾಡುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೆ ಮಂಡ್ಯ ಜನತೆಯೇ ಆ ಹೊಸ ಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತಿಚೆಗೆ ಬಿಜೆಪಿ ನಾಯಕರು ಮಂಡ್ಯ ಉಸ್ತುವಾರಿ ವಿಚಾರಕ್ಕೆ ಹೊಸ ತೀರ್ಮಾನವೊಂದನ್ನು ತೆಗೆದುಕೊಂಡಿದ್ದಾರೆ. ಈ ಮುಂಚೆ ಮಂಡ್ಯ ಉಸ್ತುವಾರಿಯಾಗಿ ಗೋಪಾಲಯ್ಯ ಇದ್ದರು. ಇದೀಗ ದಿಢೀರನೇ ಅವರಿಗೆ ಕೊಕ್ ಕೊಟ್ಟು ಸಚಿವ ಆರ್ ಅಶೋಕ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ. ಇದು ವಿರೋಧಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರ ತೀರ್ಮಾನಕ್ಕೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದ್ದು, ಅಶೋಕ್ ಅವರ ಫೋಟೋಗಳನ್ನು ಪೋಸ್ಟರ್ ಮೂಲಕ ಅಂಟಿಸಿ, ಗೋ ಬ್ಯಾಕ್ ಅಶೋಕ್ ಎಂದು ಪೋಸ್ಟರ್ ಅಂಟಿಸುತ್ತಿದ್ದಾರೆ. ಬಾಯ್ಕಾಟ್ ಪೋಸ್ಟರ್ ಕೂಡ ಗಮನಿಸಬಹುದು. ಅಶೋಕ್ ಅವರಿಂದ ಮಂಡ್ಯ ಕಟ್ಟುವುದಕ್ಕೆ ಸಾಧ್ಯವಿಲ್ಲ. ಅವರು ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.