ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ(ಜ.26) : ಅನಾವಶ್ಯಕವಾಗಿ ನಾವುಗಳು ಯಾರ ಮೇಲೂ ಆಕ್ರಮಣ ಮಾಡಲ್ಲ. ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವ ದುಷ್ಠರ ದುಷ್ಠತನವನ್ನು ಮೆಟ್ಟಿ ನಿಲ್ಲುವುದೇ ಶೌರ್ಯಯಾತ್ರೆಯ ಉದ್ದೇಶ ಎಂದು ಅಖಿಲ ಭಾರತ ವಿಶ್ವಹಿಂದು ಪರಿಷತ್ ಕಾರ್ಯದರ್ಶಿ ಹಾಗೂ ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ಎಚ್ಚರಿಸಿದರು.
ವಿಶ್ವಹಿಂದು ಪರಿಷತ್-ಬಜರಂಗದಳದಿಂದ ಚಿತ್ರದುರ್ಗದಲ್ಲಿ ಬುಧವಾರ ನಡೆದ ಶೌರ್ಯಯಾತ್ರೆಯ ನಂತರ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಂಡುಗಲಿಗಳು ಹುಟ್ಟಿದ ನಾಡು ಚಿತ್ರದುರ್ಗ. ಒನಕೆಯನ್ನೇ ಶಸ್ತ್ರ ಮಾಡಿಕೊಂಡು ಶತ್ರುಗಳನ್ನು ಸದೆಬಡಿದ ವೀರವನಿತೆ ಒನಕೆ ಓಬವ್ವ ಪರಾಕ್ರಮ ಮೆರೆದ ಪುಣ್ಯಭೂಮಿ ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ಶೌರ್ಯಯಾತ್ರೆ ನಡೆಯುತ್ತಿರುವುದು ಸಮಸ್ತ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಗೀತಾಜಯಂತಿ ಪರಾಕ್ರಮ ಮೆರೆಸಿದ ದಿನದಂದು ಯಾತ್ರೆ ನಡೆಯುತ್ತಿದೆ. ಅರ್ಜುನ ಹಿಂದು ಸಮಾಜದ ಪ್ರತೀಕ. ಬಾಬ್ರಿ ಮಸೀದಿಯನ್ನು ಕಾರ್‍ಸೇವಕರು ಧ್ವಂಸ ಮಾಡುವಾಗ ಸಾಧು, ಸಂತರು ಪ್ರೋತ್ಸಾಹಿಸಿದ್ದಾರೆ. ಹಿಂದೂ ಸಮಾಜ ನಿಜ ಜೀವನದಲ್ಲಿ ವ್ಯಕ್ತವಾಗಬೇಕು. ದೇಶದ ಆಧ್ಯಾತ್ಮ ಕೇಂದ್ರ ಬಿಂದು ಎಂದರೆ ದೇವತೆಗಳೆಂದು ತಿಳಿಸಿದರು.
ದೇಶದ ಎಲ್ಲಾ ದೇವತೆಗಳ ಕೈಯಲ್ಲಿ ಆಯುಧವಿದೆ. ಭಾರತ ಸಂಪೂರ್ಣ ಕೇಸರಿಮಯವಾಗಬೇಕು. ಒಗ್ಗಟ್ಟಿನಿಂದ ಮಾತ್ರ ಪರಾಕ್ರಮ ಮೂಡಲು ಸಾಧ್ಯ. ಅದಕ್ಕಾಗಿ ಸಮಾಜ ಸದಾ ಸರ್ವದ ಒಂದಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ಹಿಂದು ಸಮಾಜದ ಒಗ್ಗಟ್ಟನ್ನು ಸಹಿಸದವರು ಆಕ್ರಮಣ ಮಾಡಿ ಕೆಣಕಲು ಹೊರಟಿದ್ದಾರೆ.
ಲವ್‍ಜಿಹಾದ್ ಮೂಲಕ ಹಿಂದು ಬಾಲಕಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ಮುಸ್ಲಿಂ ಯುವಕರು ಮದುವೆಯಾಗಿ ನಮ್ಮ ಸಮಾಜವನ್ನು ನಾಶ ಮಾಡಲು ಬಿಡುವುದಿಲ್ಲ. ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುವವರನ್ನು ಅಲ್ಲಾನ ಪಾದಕ್ಕೆ ಕಳಿಸುತ್ತೇವೆ. ಗೋವಿನ ರಕ್ಷಣೆಗೆ ಕಟಿಬದ್ದರಾಗಿದ್ದೇವೆ. ಗೋವಿನ ಒಂದು ತೊಟ್ಟು ರಕ್ತವೂ ಈ ಮಣ್ಣಿನಲ್ಲಿ ಬಿದ್ದರೆ ಅಪವಿತ್ರವಾಗುತ್ತದೆ. ಬಜರಂಗದಳದಿಂದ ಒಂದು ವರ್ಷದಲ್ಲಿ 65 ಸಾವಿರ ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ತಡೆದು ರಕ್ಷಿಸಿದ್ದಕ್ಕಾಗಿ ನಮ್ಮ ಮೇಲೆ ಕೇಸುಗಳು ದಾಖಲಾಗಿವೆ. ಜೈಲಿಗೆ ಹೋದರೂ ಹೆದರಲ್ಲ. ಗೋಮಾತೆಯನ್ನು ರಕ್ಷಿಸುತ್ತೇವೆಂದು ಹೇಳಿದರು.
ಹಿಂದೂ ಸಮಾಜದ ಪ್ರತಿಯೊಬ್ಬರು ಶೌರ್ಯ ಪರಾಕ್ರಮವನ್ನು ಮೆರೆಯಬೇಕು. ದುಷ್ಠರ ದುಷ್ಠತನವನ್ನು ಮರ್ಧನ ಮಾಡಬೇಕಾಗಿರುವುದರಿಂದ ಹಿಂದೂಗಳು ಸದಾ ಸರ್ವದ ಒಗ್ಗಟ್ಟಾಗಿ ನಿಲ್ಲಬೇಕು. ಸಂಘಟನೆಯಿಂದ ಮಾತ್ರ ಒಗ್ಗಟ್ಟು ಸಾಧ್ಯ. ಯಾವುದೇ ಜಾತಿ ಭೇದ, ಭಾಷೆ, ಪ್ರಾಂತ ಎನ್ನುವ ಮನೋಭಾವನೆ ಬೇಡ.
ಸಮಾಜದಲ್ಲಿ ಶಾಂತಿ ಸಮೃದ್ದಿ, ಆನಂದ ವಾತಾವರಣ ಸೃಷ್ಠಿಯಾಗಬೇಕು. 1992 ರಲ್ಲಿ ಕಾರ್‍ಸೇವಕರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಗೊಮ್ಮಟವನ್ನು ಕಡೆವಿದ ಪರಿಣಾಮ ಇಂದು ಅಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ನೀವೆಲ್ಲರೂ ಅಲ್ಲಿಗೆ ಬಂದು ನೋಡಿ ಎಂದು ಗಣವೇಷಧಾರಿಗಳನ್ನು ಆಹ್ವಾನಿಸಿದರು.
ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ ಶೌರ್ಯ ಹಿಂದುಗಳ ರಕ್ಷಣೆಗಾಗಿಯೇ ಹೊರತು ಯಾರನ್ನು ಧಮನ ಮಾಡಲು ಅಲ್ಲ. ಧನ ಕೊಟ್ಟಿರುವುದು ಖರ್ಚು ಮಾಡಿ ಇನ್ನೊಬ್ಬರನ್ನು ನಾಶ ಮಾಡಲು ಅಲ್ಲ. ಲವ್ ಜಿಹಾದ್, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಭಾರತ ವಿರೋಧಿ ದೇಶದಲ್ಲಿ ಈಗ ಅನ್ನ ಆಹಾರಕ್ಕೆ ಹಾತೊರೆಯುವಂತಾಗಿದೆ. ಭಾರತ ಸುಭಿಕ್ಷೆಯಾಗಿರಲು ಗೋಮಾತೆ ಕಾರಣ. ಕಸಾಯಿಖಾನೆಗೆ ಹೋಗುವ ಜಾನುವಾರುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ಬಿಡುವುದು ಪುಣ್ಯದ ಕೆಲಸ. ಸಂಪತ್ತನ್ನು ಬಡವರು, ದೀನ ದಲಿತರಿಗೆ ದಾನ ಮಾಡಬೇಕು ಎಂದು ಹೇಳಿದರು.
ಬಜರಂಗದಳ ಕರ್ನಾಟಕ ದಕ್ಷಿಣದ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡುತ್ತ ಹಿಂದು ಸಮಾಜಕ್ಕೆ ವಿಶ್ವಾಸ ತುಂಬುವುದಕ್ಕಾಗಿ ನಡೆಯುತ್ತಿರುವ ಶೌರ್ಯಯಾತ್ರೆಯನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲಾಗುವುದು. ಐದುನೂರು ವರ್ಷಗಳ ಹೋರಾಟ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ನಮ್ಮ ದೇಶದ ಮೇಲೆ ಇಸ್ಲಾಂ, ಬ್ರಿಟೀಷರ ಆಕ್ರಮಣ ನಡೆದಿದೆ. ಅದಕ್ಕಾಗಿ ಶೌರ್ಯ ಪರಾಕ್ರಮದ ಇತಿಹಾಸವನ್ನು ಹಿಂದುಗಳಿಗೆ ತಿಳಿಸಬೇಕು ಎಂದರು.
ಶೌರ್ಯ ಪರಾಕ್ರಮ ನಮ್ಮ ದೇಶದ ಮಣ್ಣಿನ ಗುಣ. 1500 ವರ್ಷಗಳ ಕಾಲ ನಮ್ಮ ದೇಶದ ಮೇಲೆ ದಾಳಿ ನಡೆದಿದ್ದರೂ ಸಂಸ್ಕøತಿಯನ್ನು ಅಳಿಸಲು ಆಗಿಲ್ಲ. ಹಿಂದು ಸಮಾಜವನ್ನು ಜಾಗೃತಿಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ಶೌರ್ಯಯಾತ್ರೆಯ ಉದ್ದೇಶ ತಿಳಿಸಿದರು.
ಅಯೋಧ್ಯೆಯಲ್ಲಿ ನಡೆದ ಕಾರ್‍ಸೇವೆಯಲ್ಲಿ ಭಾಗವಹಿಸಿದ್ದ ಜಿ.ಎಂ.ಸುರೇಶ್ ಮತ್ತಿತರರನ್ನು ಸನ್ಮಾನಿಸಲಾಯಿತು.
ವಿಶ್ವಹಿಂದು ಪರಿಷತ್ ಶಿವಮೊಗ್ಗ ವಿಭಾಗದ ಕಾರ್ಯದರ್ಶಿ ಷಡಾಕ್ಷರಪ್ಪ, ಬಜರಂಗದಳ ಶಿವಮೊಗ್ಗ ವಿಭಾಗದ ಸಂಚಾಲಕ ಪ್ರಭಂಜನ್ ವೇದಿಕೆಯಲ್ಲಿದ್ದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
———————————————————————————–
ವಿಶ್ವಹಿಂದು ಪರಿಷತ್-ಬಜರಂಗದಳದ ಶೌರ್ಯಯಾತ್ರೆ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಹೊರಟು ಹಳೆ ಮಾಧ್ಯಮಿಕ ಶಾಲಾ ಆವರಣದವರೆಗೂ ಎರಡು ಸಾಲುಗಳಲ್ಲಿ ಶಿಸ್ತಿನಿಂದ ಸಾಗಿ ಬಂದಿತು.
ಒಂದು ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ಓಂ ಚಿನ್ನೆಯುಳ್ಳ ಕೇಸರಿ ಭಾವುಟವಿರುವ ಲಾಠಿಯನ್ನು ಹೆಗಲ ಮೇಲಿಟ್ಟುಕೊಂಡು ಮೆರವಣಗೆÂಯಲ್ಲಿ ಸಾಗುತ್ತಿದ್ದುದನ್ನು ರಸ್ತೆಯ ಎರಡು ಬದಿಗಳಲ್ಲಿ ನಿಂತು ಜನ ಕುತೂಹಲದಿಂದ ವೀಕ್ಷಿಸಿದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು.
ಯಾತ್ರೆಯುದ್ದಕ್ಕೂ ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಠಿಗೆರೆಯಲಾಗುತ್ತಿತ್ತು. ಭಾರತ ಮಾತೆ, ಹನುಮಂತ, ಶ್ರೀರಾಮನ ಮೂರ್ತಿಗಳು ಶೌರ್ಯಯಾತ್ರೆಯಲ್ಲಿ ಆಕರ್ಷಣೀಯವಾಗಿ ಕಾಣುತ್ತಿದ್ದವು.
ಅಲ್ಲಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರೆತೆ ಏರ್ಪಡಿಸಲಾಗಿತ್ತು. ಹೊಳಲ್ಕೆರೆ ರಸ್ತೆಯಲ್ಲಿರುವ ಗೌರಸಂದ್ರಮಾರಮ್ಮ ದೇವಸ್ಥಾನ, ಮುಸ್ಲಿಂ ಹಾಸ್ಟೆಲ್ ಎದುರು, ಗಾಂಧಿವೃತ್ತ, ಎಸ್.ಬಿ.ಎಂ.ವೃತ್ತ, ಪ್ರವಾಸಿ ಮಂದಿರದ ಮುಂಭಾಗ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಪ್ರಭಂಜನ್, ರುದ್ರೇಶ್ ಪಿ, ಸಂದೀಪ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ಸಂಪತ್‍ಕುಮಾರ್, ಭೀಮಸಮುದ್ರದ ಯುವ ಮುಖಂಡ ಜಿ.ಎಸ್.ಅನಿತ್‍ಕುಮಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಭಾನುಮೂರ್ತಿ ಇನ್ನು ಅನೇಕರು ಗಣವೇಷ ಧರಿಸಿ ಶೌರ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವಿಶ್ವಹಿಂದು ಪರಿಷತ್-ಬಜರಂಗದಳದ ಶೌರ್ಯಯಾತ್ರೆಯಲ್ಲಿ ಸಾಗಿದ ಗಣವೇಷಧಾರಿಗಳು