ನವದೆಹಲಿ: ಇಷ್ಟು ದಿನ ಹಿಂದುತ್ವದ ಆಧಾರದ ಮೇಲೆ ಮತ ಬ್ಯಾಂಕಿಂಗ್ ಮಾಡುತ್ತಿದ್ದ ಬಿಜೆಪಿ ಇದೀಗ ಮುಸ್ಲಿಂ ವೋಟ್ ಗಳ ಮೇಲೂ ಗಮನ ಕ್ರೋಢಿಕರಿಸಿದೆ. ಕಾಂಗ್ರೆಸ್ ಗೆ ಅಲ್ಪ ಸಂಖ್ಯಾತರ ಮತಗಳೇ ಹೆಚ್ಚಾಗಿ ಇರುವ ಕಾರಣ, ಈ ಬಾರಿ ಕಾಂಗ್ರೆಸ್ ಮತಗಳನ್ನೆಲ್ಲಾ ತನ್ನತ್ತ ಸೆಳೆಯುವ ಯೋಜನೆಯಲ್ಲಿದೆ ಬಿಜೆಪಿ. ಅದರ ಭಾಗವಾಗಿಯೇ ಈಗ ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಂರಿಗೆ ಸದಸ್ಯತ್ವ ನೀಡಲು ಮುಂದಾಗಿದೆ.
ಇತ್ತಿಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಕರೆಯೊಂದನ್ನು ನೀಡಿದ್ದರು. ಎಲ್ಲಾ ಸಮುದಾಯದವರೊಂದಿಗೆ ಸಂಪರ್ಕ ಸಾಧಿಸಲು ಕರೆ ನೀಡಿದ್ದರು. ಅದರಂತೆ ಈಗ ಬಿಜೆಪಿ ಮುಸ್ಲಿಂ ಸಮುದಾಯದವರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಹೊರಟಿದೆ.
ದೇಶದ 60 ಲೋಕಸಭಾ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಾಬಲ್ಯವಿದೆ. ಈ 60 ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಬಿಜೆಪಿಯ ತತ್ವ, ಸಿದ್ಧಾಂತವನ್ನು ವಿವರಿಸಲಾಗುವುದು. ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಐದು ಸಾವಿರ ಮುಸ್ಲಿಮರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡಲು ಚಿಂತಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಮಾಲ್ ಸಿದ್ದಿಕಿ ತಿಳಿಸಿದ್ದಾರೆ.