ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಅಳೆದು ತೂಗಿ, ಸಮಯ ತೆಗೆದುಕೊಂಡು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾದಾಮಿ ಕ್ಷೇತ್ರವಾ..? ವರುಣಾ ಕ್ಷೇತ್ರವಾ..? ಎನ್ನುವಾಗಲೇ ಕೋಲಾರ ಕ್ಷೇತ್ರ ಎಂದು ಅನೌನ್ಸ್ ಮಾಡಿದ್ದಾರೆ. ನಾನು ಇಲ್ಲಿಯೇ ನಿಲ್ಲುತ್ತೇನೆ ಎಂದಿದ್ದಾರೆ. ಅಲ್ಲಿನ ಸ್ಥಳೀಯ ಶಾಸಕರ ಬಲವಂತಕ್ಕೆ, ಕಾರ್ಯಕರ್ತರ ಮನವಿಗೆ ಹೂಗೊಟ್ಟು ಸಿದ್ದರಾಮಯ್ಯ, ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ.
ಆದರೆ ಕೆಲವೊಂದು ಬೆಳವಣಿಗೆ ನೋಡುತ್ತಾ ಇದ್ದರೆ ಸಿದ್ದರಾಮಯ್ಯ ಅವರಿಗೆ ಕೋಲಾರದ ಗೆಲುವು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಯಾಕಂದ್ರೆ ಅದಕ್ಕೆ ಉದಾಹರಣೆಯೆಂದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ನಡೆದ ಘಟನೆಯೇ ಇದಕ್ಕೆ ಉದಾಹರಣೆಯಾಗಿದೆ.
ಕಾಂಗ್ರೆಸ್ ನ ಪ್ರಜಾಧ್ವನಿ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಸುಮಾರು 50-60 ಸಾವಿರ ಜನ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆಸನದ ವ್ಯವಸ್ಥೆಯೂ ಆಗಿತ್ತು. ಆದರೆ ನಿನ್ನೆ ಕಂಡ ಜನ ಹತ್ತರಿಂದ ಹದಿನೈದು ಸಾವಿರ ಜನ ಬಂದಿದ್ದಾರೆ. ನಾಲ್ಕರಿಂದ ಐದು ಮಂದಿ ಕಾಂಗ್ರೆಸ್ ಶಾಸಕರಿದ್ದರು. ಇಷ್ಟು ಕಡಿಮೆ ಜನ ಬಂದಿರುವುದು ಎಲ್ಲರಿಗೂ ಶಾಕ್ ಆಗಿದೆ.
ಪ್ರಜಾಧ್ವನಿ ಸಮಾವೇಶದಲ್ಲಿ ರಮೇಶ್ ಕುಮಾರ್ ಮತ್ತು ಮುನಿಯಪ್ಪ ಮುಖಾಮುಖಿಯಾದರೂ ಕೂಡ ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ. ಇಬ್ಬರ ನಡುವೆ ಭಿನ್ನಮತ ಶಮನವಾಗಿತ್ತು ಎನ್ನಲಾಗಿತ್ತು. ಆದರೂ ಇಬ್ಬರು ದೂರ ದೂರ ಕೂತಿದ್ದರು. ಬೆಂಬಲ ನೀಡುತ್ತೀವಿ ಅಂತ ಕರೆದವರೇ ಸಿದ್ದರಾಮಯ್ಯ ಅವರ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಈ ಸನ್ನಿವೇಶ ನೋಡಿದರೆ ಸಿದ್ದರಾಮಯ್ಯ ಕೋಲಾರದಲ್ಲಿ ಸುಲಭವಾಗಿ ಗೆಲ್ಲಬಹುದಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.