ಹಾವೇರಿ: ಈ ಬಾರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾರ್ಯಕ್ರಮ ನಡೆದಿದೆ. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಿತು. ಅಜ್ಜಯ್ಯನ ಗದ್ದುಗೆ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದತೆ ಮಾಡಿ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಉಳಿದ ಆಹಾರ ತಿಂದು ಪ್ರಾಣಿಗಳ ಪ್ರಾಣವೇ ಹಾರಿ ಹೋಗಿದೆ.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಉಳಿದ ಆಹಾರವನ್ನೆಲ್ಲಾ ಮೈದಾನದಲ್ಲಿಯೇ ಇರಿಸಲಾಗಿತ್ತು. ಆ ಆಹಾರ ಕೊಳೆತಿದೆ. ಈ ಆಹಾರವನ್ನು ಪ್ರಾಣಿಗಳನ್ನು ತಿಂದಿದ್ದು, ಫುಡ್ ಪಾಯಿಸನ್ ಆಗಿದೆ. ಇದರ ಪರಿಣಾಮ ಸುಮಾರು 12ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಮೈದಾನದಲ್ಲಿ ಬಿದ್ದಿದ್ದ ಅನ್ನ, ಚಪಾತಿ, ರೊಟ್ಟಿ, ಪಲಾವ್ ಹೀಗೆ ಕೊಳೆತ ಆಹಾರವನ್ನು ಕುರಿಗಳು ತಿಂದಿದ್ದವು. ಬೆಳಗಾವಿಯಿಂದ ಕುರಿಮಂದೆಯವರು, ಕುರಿಗಳನ್ನು ಮೇಯಿಸುವುದಕ್ಕೆ ಬಂದಿದ್ದರು. ಮೈದಾನದಲ್ಲಿಯೇ ಬಿದ್ದಿದ್ದ ಆಹಾರವನ್ನು ತಿಂದ ಕುರಿಗಳು ಸಾವನ್ನಪ್ಪಿವೆ. ಇನ್ನು 10ಕ್ಕೂ ಹೆಚ್ಚು ಕುರಿಗಳ ಸ್ಥಿತಿ ಗಂಭೀರವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಕುರಿಗಳು ಹೀಗೆ ಸಾವನ್ನಪ್ಪಿದ್ದಕ್ಕೆ ಮಾಲೀಕರು ಸಂಕಟ ಪಡುತ್ತಿದ್ದಾರೆ.