ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ನಳೀನ್ ಕುಮಾರ್ ಕಟೀಲು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಭೆ ನಡೆದರೆ ಚಪ್ಪಲಿಗಳು ಕೈನಲ್ಲಿ ಇರುತ್ತವೆ ಎಂದಿದ್ದರು. ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ಕಟೀಲ್ ಬಾಯಿಗೆ ಮೂಳೆ ಇಲ್ಲ. ನಮ್ಮ ಹಳ್ಳಿಗಳ ಕಡೆ ಬಚ್ಚಲು ಬಾಯಿ ಅಂತ ಕರಿತಾರೆ. ಏನೇ ಮಾತನಾಡಿದ್ರು ಒಂದು ಪಕ್ಷದ ಅಧ್ಯಕ್ಷರು. ಸಂಸತ್ ಸದಸ್ಯರಾಗಿದ್ದರು. ಯಾವುದಾದರೂ ಒಂದು ಘಟನೆ ನಮ್ಮ ಪಾರ್ಟಿಯಲ್ಲಿ. ಏನಾದರೂ ಸಾಕ್ಷಿ ಇರಬೇಕಲ್ವಾ. ಯಾವುದೋ ಒಬ್ಬ ಲೀಡರ್ ಮಾಡಿದ್ದು ಇರಬೇಕು ಅಲ್ವಾ. ಅವ್ರ ಪಾರ್ಟಿಯಲ್ಲಿ ಈಗ ನಡೆದಿದೆ. ಯತ್ನಾಳ್ ಮಾತಿಗೆ, ಬೇರೆಯವರ ಮಾತಿಉಗೆ, ನಮ್ಮ ವಿಶ್ವನಾಥ್ ಹೇಳಿದ ಮಾತಿಗೆ, ನಿರಾಣಿ ಹೇಳಿದ ಮಾತಿಗೆ ಹೇಳಿದ ಮಾತು ಇದೆಯಲ್ಲ. ಅದಕ್ಕೆಲ್ಲಾ ಏನು ಅಂತ ಉತ್ತರ ಕೊಡಲಿ. ಕಟೀಲ್ ಗೆ ಯಾವ ಥರದ ಶಕ್ತಿ, ಕಂಟ್ರೋಲ್ ಕೂಡ ಪಕ್ಷದ ಮೇಲೆ ಇಲ್ಲ.
ನಮ್ಮಂಥವರು ರಿಯಾಕ್ಟ್ ಮಾಡುವುದಕ್ಕೂ ಆತ ಯೋಗ್ಯನಲ್ಲ. ಅಮಿತ್ ಶಾ ಬಂದು ಏನು ಹೇಳಿದ್ರು, ಬೊಮ್ಮಾಯಿ ಅವರ ಲೀಡರ್ ಶಿಪ್ ನಲ್ಲಿ ಚುನಾವಣೆ ನಡೆಯುತ್ತೆ ಅಂದ್ರು. ಅದೇ ಅಮಿತ್ ಶಾ ಅವರು ಮತ್ತೆ ಬಂದು ಏನು ಹೇಳಿದ್ರು, ಮೋದಿಯವರ ನೇತೃತ್ವದಲ್ಲಿ ನಡೆಯುತ್ತೆ ಅಂತ ಹೇಳಿದ್ರು. ರಾಜ್ಯದಲ್ಲಿ ನಾಯಕತ್ವ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.