ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕನಸಿನ ಕೂಸಾದ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಅದುವೆ ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನವೇ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಧಾನಿ ಮೋದಿ, ಅಂದು ಶಿವಮೊಗ್ಗಕ್ಕೆ ಬಂದು ಉದ್ಘಾಟನೆ ಮಾಡಲಿದ್ದಾರೆ.
ಶಿವಮೊಗ್ಗದಲ್ಲಿ ಸಿದ್ಧವಾದ ವಿಮಾನ ನಿಲ್ದಾಣ ರಾಜ್ಯದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ. ಕಾರ್ಯಕಾರಿಣಿ ಸಭೆಯ ವೇಳೆಯೇ ಬಿಎಸ್ ಯಡಿಯೂರಪ್ಪ ಅವರು ಪ್ರಧಾನಿ ಮೋದಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ವಿಮಾನ ನಿಲ್ದಾಣದ ಬಗ್ಗೆ ಮಾಹಿತಿ ನೀಡಿದ್ದರು. ಫೆಬ್ರವರಿ 27ರಂದು ಉದ್ಘಾಟನೆಯಾಗಲಿದೆ.ಇದೀಗ ವಿಮಾನ ನಿಲ್ದಾಣದ ಉದ್ಘಾಟನೆ ಬಗ್ಗೆ ಮಾಜಿ ಸಿಎಂ ಬಿಎಸ್ವೈ ಅವರ ಇಬ್ಬರು ಪುತ್ರರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಶ್ರೀ @narendramodi ಜೀ ಅವರ ಅಮೃತ ಹಸ್ತದಿಂದ ಶೀಘ್ರದಲ್ಲಿಯೇ ಉದ್ಘಾಟನೆಗೆ ಸಿದ್ದವಾಗಿರುವ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ @BSYBJP ಅವರ ಕನಸಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಪರಮಪೂಜ್ಯ ಶ್ರೀಗಳೊಂದಿಗೆ ಜನಪ್ರಿಯ ಸಂಸದರಾದ ಶ್ರೀ @BYRBJP ಅವರ ನೇತೃತ್ವದಲ್ಲಿ ಭೇಟಿ ನೀಡಿ ವೀಕ್ಷಿಸಲಾಯಿತು.ಪ್ರಧಾನಿ ಶ್ರೀ @narendramodi ಜೀ ಅವರ ಅಮೃತ ಹಸ್ತದಿಂದ ಶೀಘ್ರದಲ್ಲಿಯೇ ಉದ್ಘಾಟನೆಗೆ ಸಿದ್ದವಾಗಿರುವ, ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ @BSYBJP ಅವರ ಕನಸಿನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಪರಮಪೂಜ್ಯ ಶ್ರೀಗಳೊಂದಿಗೆ ಜನಪ್ರಿಯ ಸಂಸದರಾದ ಶ್ರೀ @BYRBJP ಅವರ ನೇತೃತ್ವದಲ್ಲಿ ಭೇಟಿ ನೀಡಿ ವೀಕ್ಷಿಸಲಾಯಿತು. ಅತ್ಯಾಕರ್ಶಕ ವಿನ್ಯಾಸದ, ಸುಸಜ್ಜಿತ ವಿಮಾನ ನಿಲ್ದಾಣವು ಜಿಲ್ಲೆಯ ಹೊನ್ನಕಲಶವಾಗಲಿದೆ ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಮಲೆನಾಡಿನ ಹೆಬ್ಬಾಗಿಲಿಗೆ “ವಿಮಾನ ನಿಲ್ದಾಣ”ದ ತೋರಣ…ನನಸಾಗುತ್ತಿದೆ ಲೋಹದ ಹಕ್ಕಿಯ ಪಯಣದ ಕನಸು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಿಲ್ಲೆಯ ಪರಮಪೂಜ್ಯ ಶ್ರೀಗಳೊಂದಿಗೆ ಭೇಟಿ ನೀಡಿ ವೀಕ್ಷಿಸಲಾಯಿತು. ಈ ವಿಮಾನ ನಿಲ್ದಾಣವನ್ನು ಪ್ರಧಾನಿ ಶ್ರೀ @narendramodi ಅವರು ಫೆಬ್ರವರಿ 27 ರಂದು ಉದ್ಘಾಟಿಸಲಿದ್ದಾರೆ ಎಂದು ಬಿವೈ ರಾಘವೇಂದ್ರ ಅವರು ಟ್ವೀಟ್ ಮಾಡಿದ್ದಾರೆ.