ಮೈಸೂರು: 2023ರ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಲೆಕ್ಕದಲ್ಲಿ ಸಮಯ ಬಾಕಿ ಇದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿವೆ. ಈ ಬಾರಿ ಹೇಗಾದರೂ ಮಾಡಿ, ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿದ್ದಾರೆ. ಅದೇ ಕಾರಣಕ್ಕೆ ಪಂಚರತ್ನ ರಥಯಾತ್ರೆ ಮೂಲಕ ಜನರ ಬಳಿ ಜೆಡಿಎಸ್ ನಾಯಕರು ಹೋಗುತ್ತಿದ್ದಾರೆ.
ಇದೀಗ ಮಗನ ಗೆಲುವಿಗಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಇದೀಗ ತಾಯಿ ಚಾಮುಂಡಿಯ ಮೊರೆ ಹೋಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಜೊತೆಗೆ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದು, ಕುಮಾರಸ್ವಾಮಿ ಸಿಎಂ ಆಗಲಿ ಎಂದು ಕೇಳಿಕೊಂಡಿದ್ದಾರೆ.
ಹೆಂಡತಿ ಚನ್ನಮ್ಮ ಅವರ ಜೊತೆಗೆ ತಾಯಿ ಸನ್ನಿಧಾನಕ್ಕೆ ಬಂದ ದೇವೇಗೌಡ ಅವರು, ರಾಜ್ಯದ ರೈತರು ಸಭೀಕ್ಷೆಯಿಂದ ಬಾಳಲಿ ಎಂದು ಹರಕೆ ಇಟ್ಟಿದ್ದಾರೆ. ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.







