ಪ್ರಧಾನಿ ನರೇಂದ್ರ ಮೋದಿ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರ ಸಂಚಲನ ಮೂಡಿಸುತ್ತಿದೆ.
ಭಾರತ ಮಾತ್ರವಲ್ಲದೆ ಹಲವು ದೇಶಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕೋಲಾಹಲ ಎದ್ದಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಗಂಭೀರವಾಗಿ ಸ್ಪಂದಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ(Arindam Bagchi)
ಇದು ಅಪಖ್ಯಾತಿ ಹರಡುವ ದುರುದ್ದೇಶಪೂರಿತ ಉದ್ದೇಶದಿಂದ ಪಕ್ಷಪಾತದ ಅಭಿಯಾನದ ಭಾಗವಾಗಿದೆ. ಈ ಕಥೆಯ ಹಿಂದೆ ವಸಾಹತುಶಾಹಿ ಮನಸ್ಥಿತಿ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ಏಜೆನ್ಸಿಯು ಅಪಖ್ಯಾತಿ ಸೃಷ್ಟಿಸುವ ಉದ್ದೇಶದಿಂದ ಈ ಕಥೆಯನ್ನು ಪ್ರಸಾರ ಮಾಡಲಾಗಿದೆ ಎಂದು ನಾವು ನಂಬುತ್ತೇವೆ. ಇದರಲ್ಲಿ ಪಕ್ಷಪಾತ ಮತ್ತು ವಸಾಹತುಶಾಹಿ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹ ವಿಷಯಗಳನ್ನು ನಾವು ಗೌರವಿಸಲು ಸಾಧ್ಯವಿಲ್ಲ. ಇದರ ಹಿಂದಿನ ಉದ್ದೇಶವು ನಮಗೆ ಆಶ್ಚರ್ಯವನ್ನುಂಟುಮಾಡಿದೆ, ”ಎಂದು ಅರಿಂದಮ್ ಬಾಗ್ಚಿ ಹೇಳಿದರು.
ಆ ಸಾಕ್ಷ್ಯಚಿತ್ರದಲ್ಲಿ ಏನಿದೆ?
ಬಿಬಿಸಿ ಈ ಸಾಕ್ಷ್ಯಚಿತ್ರವನ್ನು ‘ಇಂಡಿಯಾ: ದಿ ಮೋದಿ ಕ್ವೆಸ್ಚನ್ ‘ (India: The Modi Question) ಎಂಬ ಎರಡು ಸರಣಿಗಳಲ್ಲಿ ನಿರ್ಮಿಸಿದೆ. ಈ ಸರಣಿಯಲ್ಲಿ 2002ರ ಗುಜರಾತ್ ದಂಗೆಯ ಘಟನೆಯನ್ನು ಉಲ್ಲೇಖಿಸಲಾಗಿದೆ. 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಆರೋಪಿಯಾಗಿದ್ದರು. ಆದರೆ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಎಸ್‌ಐಟಿ ಕ್ಲೀನ್ ಚಿಟ್ ನೀಡಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು.
I honour & respect the clarity of thinking of our PM @RishiSunak & his swift response to the characterisation of Sri @narendramodi ji done in the parliament. #DefundtheBBC @VDoraiswami @reachind_uk @amarprasadreddy @KirenRijiju pic.twitter.com/JXpht87VDw
— Gayatri 🇬🇧🇮🇳(BharatKiBeti) (@changu311) January 18, 2023
ಬ್ರಿಟಿಷ್ ಸಂಸತ್ತಿನಲ್ಲಿ ಸಾಕ್ಷ್ಯಚಿತ್ರದ ಚರ್ಚೆ ನಡೆದಿದೆ. ಇದನ್ನು ಉಲ್ಲೇಖಿಸಿ ಪಾಕಿಸ್ತಾನಿ ಮೂಲದ ಸಂಸದರೊಬ್ಬರು ಭಾರತದ ಪ್ರಧಾನಿ ಮೋದಿ ವಿರುದ್ಧ ಅನುಚಿತ ಕಾಮೆಂಟ್ ಮಾಡಿದ್ದಾರೆ. ಅಂತಹ ದೇಶದೊಂದಿಗೆ ಯುಕೆ ರಾಜತಾಂತ್ರಿಕ ಸಂಬಂಧವನ್ನು ಕಾಪಾಡಿಕೊಳ್ಳುವುದು ಸೂಕ್ತವಲ್ಲ ಎಂದು ಅವರು ಹೇಳಿದರು. ಆದರೆ, ಯುಕೆ ಪ್ರಧಾನಿ ರಿಷಿ ಸುನಕ್ ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಆ ಸಂಸದರ ಮಾತಿನಲ್ಲಿ ಸತ್ಯಾಂಶವಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಯುಕೆ ಸರ್ಕಾರ ಸ್ಪಷ್ಟವಾಗಿದೆ ಎಂದು ರಿಷಿ ಸುನಕ್ ತಿಳಿಸಿದ್ದಾರೆ. ಭಾರತ ಮತ್ತು ಯುಕೆ ನಡುವಿನ ದೀರ್ಘಕಾಲದ ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ಸಾಕ್ಷ್ಯಚಿತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಭಾರತದಲ್ಲಿ ಸರಣಿ ಪ್ರಸಾರವಾಗಿಲ್ಲ. ನನ್ನ ಸಹೋದ್ಯೋಗಿಗಳು ನನಗೆ ಹೇಳಿರುವ ಮೂಲಕ ನಾನು ಅದರ ಬಗ್ಗೆ ಕೇಳಿದ ಆಧಾರದ ಮೇಲೆ ಮಾತ್ರ ಮಾತನಾಡುತ್ತಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.