ಶಿವನ ದೇವಸ್ಥಾನಕ್ಕೆ ಇಲ್ಲಿ ಜೀವಂತ ಏಡಿಯೇ ಕಾಣಿಕೆ..!

suddionenews
1 Min Read

ಶಿವನ ದೇವಸ್ಥಾನಕ್ಕೆ ಹೋಗುವಾಗ ಮಾಂಸಾಹಾರ ತಿಂದು ಹೋದರೇನೆ ಅದನ್ನು ಅಪಶಕುನ ಎನ್ನುತ್ತಾರೆ. ಪ್ರಾಣಿ – ಪಕ್ಷಿಗಳನ್ನು ನೀಡುವುದು ಒಳ್ಳೆಯದಲ್ಲ ಎಂಬ ಪ್ರತೀತಿ ಇದೆ. ಆದರೆ ಇಲ್ಲೊಂದು ಕಡೆ ಶಿವನ ದೇವಾಲಯಕ್ಕೆ ಹೋಗುವವರು ಜೀವಂತ ಏಡಿಯನ್ನೇ ತೆಗೆದುಕೊಂಡ ಹೋಗಬೇಕಾದ ಸಂಪ್ರದಾಯವಿದೆ. ಎಲ್ಲಿ..? ಯಾಕೆ..? ಎಂಬ ಡಿಟೈಲ್ ಇಲ್ಲಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಗುಜರಾತ್ ನ ಸೂರತ್ ನಲ್ಲಿ ರಾಮನಾಥ್ ಶಿರಘೇಲಾ ಎಂಬ ದೇವಸ್ಥಾನವಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಬರುವ ಭಕ್ತರು ಹರಕೆಯಂತೆ ಜೀವಂತ ಏಡಿಗಳನ್ನು ಶಿವನಿಗೆ ನೀಡುತ್ತಾರೆ.

ದೇವರಿಗೆ ಏಡಿಯನ್ನು ಸಮರ್ಪಿಸಿದ ಬಳಿಕ ಆ ಏಡಿಗಳನ್ನು ತೆಗೆದುಕೊಂಡು ಹೋಗಿ, ತಾಪಿ ನದಿಗೆ ಬಿಡುತ್ತಾರೆ. ಮಹಿಳೆಯರೇ ಹೆಚ್ಚು ಇಂಥದ್ದೊಂದು ಹರಕೆ ಹೊರುತ್ತಾರೆ. ಕಿವಿಗೆ ಸಂಬಂಧಿಸಿದ ಕಾಯಿಲೆಗಳೇನಾದರೂ ಇದ್ದರೆ ಈ ದೇವಸ್ಥಾನದಲ್ಲಿ ಏಡಿಗಳನ್ನು ಸಮರ್ಪಿಸುವ ಸಂಪ್ರದಾಯವಿದೆ.

Share This Article
Leave a Comment

Leave a Reply

Your email address will not be published. Required fields are marked *