ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಇಂದು ಪ್ರಧಾನಿ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಖಮ್ಮಮ್ ನಲ್ಲಿ ಬೃಹತ್ ಸಮಾವೇಶ ನಡೆಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2014ರಿಂದಲೂ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿರುವ ಕೆಸಿಆರ್, 2018ರ ವಿಧಾನಸಭಾ ಚುನಾವಣೆಯಲ್ಲೂ ಗಮನ ಸೆಳೆದಿದ್ದರು.
ಇತ್ತಿಚೆಗೆ ತಮ್ಮದೇ ರಾಷ್ಟ್ರೀಯ ಪಕ್ಷವನ್ನು ಆರಂಭಿಸಿದ್ದಾರೆ. ಬಿಆರ್ಎಸ್ ಎಂಬ ಪಕ್ಷವನ್ನು ಆರಂಭಿಸಿದ್ದು, ಅಂದು ದೆಹಲಿಯಲ್ಲಿ ಪಕ್ಷ ಉದ್ಘಾಟನೆ ಮಾಡಿದಾಗ, ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಇದ್ದರು. ಆದರೆ ಇಂದು ಮೆಗಾ ಪಬ್ಲಿಕ್ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ದಂಡೇ ಹರಿದು ಬಂದಿದೆ. ಕೆ ಚಂದ್ರಶೇಖರ್ ರಾವ್ ಗೆ ಮಹಾಪೂರ ಬೆಂಬಲ ಸಿಕ್ಕಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಿಪಿಐ ನ್ಯಾಷನಲ್ ಸೆಕ್ರೆಟರಿಡಿ ರಾಜಾ ಸೇರಿದಂತೆ ಹಲವು ರಾಜಕೀಯ ಗಣ್ಯರು ಬೆಂಬಲಕ್ಕೆ ನಿಂತಿದ್ದಾರೆ.
ಬಿಜೆಪಿ ಅಧಿಕಾರ ಉರುಳಲು ಇನ್ನು ಹೆಚ್ಚಿನ ದಿನ ಉಳಿದಿಲ್ಲ. ಕೇವಲ 400 ದಿನಗಳು ಮಾತ್ರ ಬಾಕಿ ಇದೆ. ಇಂದಿನಿಂದ ಅವರ ಸಮಯ ಶುರುವಾಗಿದೆ. ಇನ್ನು ಉಳಿದಿರುವುದು 399 ದಿನಗಳು ಮಾತ್ರ ಅಂತ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ.