ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಸೀಬಾರದ ಸಮೀಪವಿರುವ ಮಾರಘಟ್ಟದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದುರ್ಗಾಂಭಿಕ ದೇವಿ ಜಾತ್ರೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನ ಸೇರಿದಂತೆ ಇಡಿ ಗ್ರಾಮವನ್ನೇ ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಅಲಂಕರಿಸಲಾಗಿತ್ತು.
ಸಿಡಿ ಕಂಬವನ್ನು ಬಣ್ಣಬಣ್ಣದ ವಸ್ತ್ರ, ಬಾಳೆದಿಂಡು, ಬಲೂನು ಹಾಗೂ ಕಂಬದ ಒಂದು ತುದಿಯನ್ನು ಕಮಾನು ರೀತಿಯಲ್ಲಿ ಸಿಂಗರಿಸಿ ದುರ್ಗಾಂಭ ದೇವಿಯನ್ನು ಬಗೆ ಬಗೆಯ ಹೂವು ಹಾಗೂ ಹಾರಗಳಿಂದ ಅಲಂಕರಿಸಿ ಪೂಜಿಸಲಾಯಿತು. ಎಲ್ಲಾ ಜಾತಿಯವರು ಯಾವುದೇ ತಾರತಮ್ಯವಿಲ್ಲದೆ ಜಾತ್ರೆಯಲ್ಲಿ ದುರ್ಗಾಂಭಿಕ ದೇವಿಗೆ ಭಕ್ತಿ ಸಮರ್ಪಿಸಿದರು.
ಸಿಡಿ ಆಡಲು ಅವಕಾಶ ನೀಡದ ಕಾರಣ ಹರಕೆ ಹೊತ್ತವರು ಸಿಡಿಯ ಒಂದು ಕಂಬ ಹಿಡಿದು ನೆಲದಲ್ಲಿಯೇ ಮೂರು ಸುತ್ತು ತಿರುಗಿ ಹರಕೆ ತೀರಿಸಿದರು. ಪೋಷಕರು ಚಿಕ್ಕ ಚಿಕ್ಕ ಮಕ್ಕಳನ್ನು ಸಿಡಿ ಕಂಬಕ್ಕೆ ತಾಕಿಸುತ್ತಿದ್ದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ.ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿನಾಗರಾಜ್, ಐನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣ ದೇವರಾಜ್, ಚಿಕ್ಕಣ್ಣ, ಷಣ್ಮುಖಪ್ಪ, ಶಿವಮೂರ್ತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಜಾತ್ರೆಯಲ್ಲಿ ಭಾಗವಹಿಸಿದ್ದರು.