ಬೆಂಗಳೂರು: ಎಲ್ಲಿಯೇ ಹೋದರೂ ಎಲ್ಲಿಯೇ ಬಂದರೂ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೆಚ್ಚು ಟಾರ್ಗೆಟ್ ಆಗಿದ್ದಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಂಡ್ ಫ್ಯಾಮಿಲಿ. ಬಿಜೆಪಿ ಪಕ್ಷದಲ್ಲಿಯೇ ಇದ್ದುಕೊಂಡು ಬಿಜೆಪಿ ವಿರುದ್ಧವೇ ಅತಿ ಹೆಚ್ಚು ಮಾತನಾಡುತ್ತಿದ್ದರು. ನೋಡುವ ತನಕ ನೋಡಿ ಕೇಂದ್ರ ಶಿಸ್ತು ಸಮಿತಿಯಿಂದ ಶಾಸಕ ಯತ್ನಾಳ್ ಗೆ ನೋಟೀಸ್ ಬಂದಿದೆ.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು. ವೈಯಕ್ತಿಕವಾಗಿಯೂ ಪಕ್ಷದ ವಿರುದ್ಧ ಹೇಳಿಕೆ ನೀಡಬಾರದೆಂದು ಎಚ್ಚರಿಕೆ ನೀಡಿದೆ. ಜೊತೆಗೆ ಹದಿನೈದು ದಿನದ ಒಳಗೆ ನೋಟೀಸ್ ಗೆ ಉತ್ತರಿಸುವಂತೆ ಸೂಚನೆ ನೀಡಿದೆ ಕೇಂದ್ರ ಶಿಸ್ತು ಸಮಿತಿ.
ಬಸನಗೌಡ ಪಾಟೀಲ್ ಯತ್ನಾಳ್ ಹೀಗೆ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದ ಕಾರಣ ರಾಜ್ಯ ಶಿಸ್ತು ಸಮಿತಿ ಅದಾಗಲೇ ಎಚ್ಚರಿಕೆಯನ್ನು ನೀಡಿತ್ತು. ಅದಕ್ಕೆ ಸೊಪ್ಪು ಹಾಕದೆ, ಮತ್ತೆ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದರು. ಬಳಿಕ ಕೇಂದ್ರ ಎಂಟ್ರಿಯಾಗಿದೆ. ಈಗ ಕೇಂದ್ರದ ಸಮಿತಿಗಾದರೂ ತಲೆಬಾಗುತ್ತಾರಾ ನೋಡಬೇಕಿದೆ.