ಶಿವಮೊಗ್ಗ: ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಮೈಸೂರಿನಿಂದ ತಲೆಮರೆಸಿಕೊಂಡು ಹೋದವ ಗುಜರಾತ್ ನಲ್ಲಿ ತಗಲಾಕಿಕೊಂಡಿದ್ದ. ಸ್ಯಾಂಟ್ರೋ ರವಿ ಬಂಧನವಾದಾಗಲೇ ಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತ್ ಪ್ರವಾಸದಲ್ಲಿದ್ದರು. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಚಿವ ಆರಗ ಜ್ಞಾನೇಂದ್ರ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಹೆಚ್ಡಿಕೆ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಆರಗ ಜ್ಞಾನೇಂದ್ರ ಬೇಸರ ಮಾಡಿಕೊಂಡಿದ್ದಾರೆ.
ಪಿಂಪ್ ಗಳಿಂದ ದುಡ್ಡು ತೆಗೆದುಕೊಳ್ಳುವವನು ನಾನಲ್ಲ. ಹಲ್ಕಾ ದಂಧೆಗಳನ್ನು ಮಾಡುವಂತ ಸಂದರ್ಭ ಬಂದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ. ಸ್ಯಾಂಟ್ರೋ ರವಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ಮನೆಗೆ ಸಾವಿರಾರು ಜನ ಬರುತ್ತಾರೆ, ಹೋಗುತ್ತಾರೆ, ಎಲ್ಲರ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೋಡಿ ಒಳಗೆ ಬಿಡುವುದಕ್ಕೆ ಆಗುವುದಿಲ್ಲ.
ಇಂಥ ಹೇಳಿಕೆಗಳು ಮಾಜಿ ಸಿಎಂ ಘನತೆಗೆ ತಕ್ಕುದಲ್ಲ. ಸ್ಯಾಂಟ್ರೋ ರವಿ ನನಗೆ ಸಂಪರ್ಕವಿದ್ದಿದ್ದರೆ, ಅವನನ್ನು ಬಂಧಿಸದಂತೆ ತಡೆಯುವುದು ನನಗೆ ದೊಡ್ಡ ವಿಚಾರವೇನು ಅಲ್ಲ. ನನ್ನ ಗುಜರಾತ್ ಕಾರ್ಯಕ್ರಮ ಆರು ತಿಂಗಳ ಮುಂಚೆಯೇ ನಿಗದಿಯಾಗಿತ್ತು. ಅಲ್ಲಿಗೆ ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದು. ಜೊತೆಗೆ ಪ್ರತಿಕ್ಷಣ ನಾನು ಎಲ್ಲಿಗೆ ಹೋಗಿದ್ದೆ ಎಂಬುದು ಸರ್ಕಾರದ ಬಳಿ ಮಾಹಿತಿ ಇರುತ್ತದೆ ಎಂದಿದ್ದಾರೆ.