ಕಲಬುರಗಿ: ದೂರು ದಾಖಲಾದ ಹನ್ನೊಂದು ದಿನಕ್ಕೆ ಕಡೆಗೂ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ನಲ್ಲಿ ಅಡಗಿಕೊಂಡಿದ್ದ ರವಿಯನ್ನು ಇಂದು ಮಧ್ಯಾಹ್ನ ಬಂಧಿಸಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಗುಜರಾತ್ ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಹೋಂ ಮಿನಿಸ್ಟರ್ ಕೂಡ ಗುಹರಾತ್ ನಲ್ಲಿಯೇ ಇದ್ದಾರೆ. ಅಲ್ಲಿ ಸಿಕ್ಕಿದ್ರೆ ವಿದೇಶಕ್ಕೆ ಕಳಿಸೋ ಪ್ಲ್ಯಾನ್ ನಲ್ಲಿ ಏನಾದರೂ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಸ್ಯಾಂಟ್ರೋ ರವಿಗೆ ರಾಜಕೀಯ ನಾಯಕರ ಹೆಸರು ಹೊರ ಬರುತ್ತೆ. ಸ್ಯಾಂಟ್ರೋ ರವಿಯನ್ನು ರಕ್ಷಣೆ ಮಾಡಲು ಹೊರಟಿದ್ರಾ ಗೊತ್ತಿಲ್ಲ. ಗುಜರಾತ್ ನಲ್ಲಿ ಅರೆಸ್ಟ್ ಆಗಿದ್ದಾನೆ ಅಂದ್ರೆ ನಂಗೆ ಹಾಗೆ ಅನ್ನಿಸ್ತಾ ಇದೆ. ಇದರಲ್ಲಿ ಏನೋ ಚಿದಂಬರ ರಹಸ್ಯ ಇದೆ ಅಂತ ಅನ್ನಿಸ್ತಾ ಇದೆ ಎಂದಿದ್ದಾರೆ.
ಇನ್ನು ಸ್ಯಾಂಟ್ರೋ ರವಿ ಮೇಲೆ ಅಕ್ರಮ ವರ್ಗಾವಣೆ, ಲೈಂಗಿಕ ದೌರ್ಜನ್ಯ, ವಂಚನೆ, ಕೌಟುಂಬಿಕ ದೌರ್ಜನ್ಯ ದೂರು ದಾಖಲಾಗಿತ್ತು. ಆತನ ಹೆಂಡತಿಯೂ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಆತನನ್ನು ಹುಡುಕಲು ಹೊರಟಾಗ ತಲೆ ಮರೆಸಿಕೊಂಡು ಗುಜರಾತ್ ಸೇರಿದ್ದ.