Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶೂಟಿಂಗ್ ವೇಳೆ ಪೆಟ್ಟು : ಆಸ್ಪತ್ರೆಗೆ ದಾಖಲಾದ ನಟ ಶ್ರೀಮುರುಳಿ..!

Facebook
Twitter
Telegram
WhatsApp

ಬೆಂಗಳೂರು: ಫೈಟ್ ದೃಶ್ಯಗಳನ್ನ ತೆರೆ ಮೇಲೆ ನೋಡುವಾಗ ವಾವ್ ಅಂತ ಖುಷಿ ಪಟ್ಟು, ಶಿಳ್ಳೆ, ಚಪ್ಪಾಳೆ ಹೊಡೆಯುತ್ತೀವಿ. ಆದರೆ ಅದರ ಹಿಂದಿನ ಸಾಕಷ್ಟು ಶ್ರಮ ಕಾಣೋದಿಲ್ಲ. ಅದೆಷ್ಟೋ ಜನರಿಗೆ ಮೈಕೈಗೆ ಪೆಟ್ಟಾಗಿರುತ್ತದೆ. ಇದೆಲ್ಲವನ್ನು ಹೇಳುವುದಕ್ಕೆ ಕಾರಣ ಇಂದು ನಟ ಶ್ರೀಮುರುಳಿಗೆ ಶೂಟಿಂಗ್ ವೇಳೆ ಪೆಟ್ಟಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿದೆ.

ಹೊಂಬಾಳೆ ಬ್ಯಾನರ್ ನಲ್ಲಿ ನಟ ಶ್ರೀಮುರುಳಿ ಬಘೀರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಮದಗಜ ಸಿನಿಮಾ ಬಳಿಕ ಶ್ರೀಮುರುಳಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಕೊನೆ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಇನ್ನೆರಡು ದಿನದಲ್ಲಿ ಶೂಟಿಂಗ್ ಮುಕ್ತಾಯವಾಗುತ್ತಿತ್ತು.

ಕಳೆದ ಬಾರಿ ಅಂದ್ರೆ ಮದಗಜ ಸಿನಿಮಾ ಮಾಡುವಾಗ ಶ್ರೀಮುರುಳಿ ಕಾಲಿಗೆ ಪೆಟ್ಟಾಗಿತ್ತು. ಆಗ ಚಿಕಿತ್ಸೆ ಪಡೆದಿದ್ದರು. ಆದರೆ ಬಘೀರ ಶೂಟಿಂಗ್ ಸಮಯದಲ್ಲೂ ನಟ ಶ್ರೀಮುರುಳಿಗೆ ಅದೇ ಕಾಲಿಗೆ ಪೆಟ್ಟಾಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಈಗ ರೆಸ್ಟ್ ನಲ್ಲಿದ್ದು, ಮತ್ತೆ ಶೂಟಿಂಗ್ ಯಾವಾಗ ಹೋಗುತ್ತಾರೆ ಎಂಬ ಅಪ್ಡೇಟ್ ಇನ್ನು ಸಿಗಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳ ಬೆಂಕಿ ಇಲ್ಲದೆ ಅಡುಗೆ ತಯಾರಿಸುವ ಕಾರ್ಯಕ್ರಮ

ಸುದ್ದಿಒನ್, ಚಿತ್ರದುರ್ಗ, ಜೂನ್.29 :  ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಬೆಂಕಿ ಇಲ್ಲದೆ ಅಡುಗೆ ತಯಾರಿಸುವ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.  ಮಕ್ಕಳು ಕೇವಲ ಓದಿಗಷ್ಟೇ ಸೀಮಿತರಾಗದೇ ಸಹಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಹಾಗೂ ಮಕ್ಕಳಲ್ಲಿರುವ  ಪ್ರತಿಭೆಯನ್ನು 

ದರ್ಶನ್ ಭೇಟಿಯಾದ ರಕ್ಷಿತಾ-ಪ್ರೇಮ್ ಹೇಳಿದ್ದೇನು..?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಈ ಪ್ರಕರಣ ಸಂಬಂಧ ಆರಂಭದಲ್ಲಿ ಇಂಡಸ್ಟ್ರಿಯವರು ಯಾರೂ ಕೂಡ ಮಾತನಾಡುತ್ತಿರಲಿಲ್ಲ. ಈಗ ಒಬ್ಬೊಬ್ಬರೇ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ದರ್ಶನ್ ಪರ ಮಾತನಾಡುವುದು, ದರ್ಶನ್ ಪರ

ಹೊಳಲ್ಕೆರೆ | ಪಾರ್ವತಮ್ಮ ಕಾಣೆ : ಪತ್ತೆಗೆ ಮನವಿ

ಚಿತ್ರದುರ್ಗ. ಜೂನ್.29: ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದ ವೃದ್ಧೆ ಪಾರ್ವತಮ್ಮ (86 ವರ್ಷ) ಅವರು ಜೂನ್ 28ರಂದು ಕಾಣೆಯಾಗಿರುವ ಕುರಿತು ಹೊಳಲ್ಕೆರೆಯ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕಾಣೆಯಾದ ವೃದ್ಧೆಯ ಚಹರೆ ಇಂತಿದೆ. ಪಾರ್ವತಮ್ಮ

error: Content is protected !!