ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.11): ಕಲೆ ಜೀವಂತವಾಗಿರಬೇಕಾದರೆ ಕಲಾವಿದರನ್ನು ಪೋಷಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ತಿಳಿಸಿದರು.
ಆಯಿತೋಳು ಗ್ರಾಮದ ಮಾರುತಿ ಸಾಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಕ್ರೀಡಾಭವನದಲ್ಲಿ ಇತ್ತೀಚೆಗೆ ನಡೆದ ಸುಗಮ ಸಂಗೀತ ಹಾಗೂ ಜಾನಪದ ಸಂಗೀತ ಸಂಭ್ರಮ ಉದ್ಗಾಟಿಸಿ ಮಾತನಾಡಿದರು.
ಕಲಾವಿದರ ಕುಟುಂಬ ಅತ್ಯಂತ ಶ್ರೇಷ್ಟವಾದುದು. ಅದಕ್ಕಾಗಿ ಕಲಾವಿದರು ಕಲೆಯನ್ನು ಗೌರವಿಸಬೇಕಾಗಿದೆ. ಜೊತೆಗೆ ಪ್ರೇಕ್ಷಕರು ಕಲಾವಿದರನ್ನು ಉಳಿಸಬೇಕು. ನ್ಯಾಯಾಲಯದಲ್ಲಿ ಕುರುಕ್ಷೇತ್ರ ನಾಟಕವಾಡಿಸಿದ ಮೇಲೆ ಕಲೆಗೆ ಎಂತಹ ಗೌರವವಿದೆ ಎನ್ನುವುದು ನನಗೆ ತಿಳಿಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಉದ್ಯಮಿ ಸೈಟ್‍ಬಾಬಣ್ಣ, ಕಲಾವಿದ ಆಯಿತೋಳು ಜಿ.ಎನ್. ವಿರುಪಾಕ್ಷಪ್ಪ, ಡಿ.ಎನ್.ನಿಂಗಪ್ಪ ವೇದಿಕೆಯಲ್ಲಿದ್ದರು.
ಸುಗಮ ಸಂಗೀತ, ಭಜನೆ, ಜಾನಪದ, ಸೋಬಾನೆ ಪದಗಳನ್ನು ಹಾಡಿ ಕಲಾವಿದರು ಪ್ರೇಕ್ಷಕರನ್ನು ರಂಜಿಸಿದರು.