ಜನವರಿ 12 ರಂದು ದಾವಣಗೆರೆಯಲ್ಲಿ ಯುವ ಸಮಾವೇಶ : ಮಹೇಶ್ ಸಿ.ನಗರಂಗೆರೆ

suddionenews
1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.09): ದಾವಣಗೆರೆಯ ಮೋತಿವೀರಪ್ಪ ಕಾಲೇಜು ಮೈದಾನದಲ್ಲಿ ಜ.12 ರಂದು ಬೆಳಿಗ್ಗೆ 10 ರಿಂದ ಸಂಜೆ ನಾಲ್ಕು ಗಂಟೆವರೆಗೆ ಯುವ ಸಮಾವೇಶ ನಡೆಸಲಾಗುವುದೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಸಂಚಾಲಕ ಮಹೇಶ್ ಸಿ.ನಗರಂಗೆರೆ ತಿಳಿಸಿದರು.

ಪತ್ರಕರ್ತರ ಭವದನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರವರ ಕನಸಿನಂತೆ ಯುವ ಸಮೂಹವನ್ನು ದುಶ್ಚಟದಿಂದ ದೂರವಿರುವಂತೆ ಜಾಗೃತಿಗೊಳಿಸುವುದು ಸಮಾವೇಶದ ಉದ್ದೇಶವಾಗಿದೆ. ತಪ್ಪುದಾರಿಗೆ ಹೋಗದಂತೆ ಎಚ್ಚರ ವಹಿಸಿದಾಗ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.

ರಸ್ತೆ ಅಗಲೀಕರಣ ಸಂದರ್ಭಗಳಲ್ಲಿ ಹಳೆ ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಆಗ ನಮ್ಮ ಗಮನಕ್ಕೆ ತಂದರೆ ಜೆ.ಸಿ.ಬಿ.ತೆಗೆದುಕೊಂಡು ಹೋಗಿ ಬುಡ ಸಮೇತ ಕೀಳುವ ಮರಗಳನ್ನು ಗುಂಡಿ ತೆಗೆದು ನೆಟ್ಟು ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸಲಾಗುವುದೆಂದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ಯುವ ಪ್ರಣಾಳಿಕೆ ಬಿಡುಗಡೆಗೊಳಿಸುವರು. ಯುವ ಘಟಕದ ರಘು ಜಾಣಗೆರೆ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಚಿತ್ರದುರ್ಗ ಜಿಲ್ಲೆಯಿಂದ ನೂರರಿಂದ ಇನ್ನೂರು ಯುವಕರು ಸಮಾವೇಶಕ್ಕೆ ತೆರಳಲಿದ್ದು, ಒಟ್ಟು ಒಂದುವರೆ ಸಾವಿರ ಯುವಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಬೇಡರೆಡ್ಡಿಹಳ್ಳಿ ನಾಗಿರೆಡ್ಡಿ, ಸಿದ್ರಾಮಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *