ತಿರುವನಂತಪುರಂ: ಬರೀ ಊಟ ಅಂತಾನೆ ಅಲ್ಲ, ಶಾಪಿಂಗ್ ಅದು ಇದು ಅಂತ ಆನ್ಲೈನ್ ನಲ್ಲೇ ಜನ ಅಡಿಕ್ಟ್ ಆಗಿದ್ದಾರೆ. ಬೆಳಗ್ಗೆ ತಿಂಡಿ ಏನು ಮಾಡಬೇಕು ಅಂತ ಗೊತ್ತಾಗದೆ ಹೋದರೆ ಆನ್ಲೈನ್, ಏನೋ ತಿನ್ನಬೇಕು ಎನಿಸುತ್ತಿದೆ ಅಂದ್ರೆ ಆನ್ಲೈನ್ ಹೀಗೆ, ಎಲ್ಲದನ್ನು ಆನ್ಲೈನ್ ಮೂಲಕವೇ ತರಿಸಿಕೊಳ್ಳುವ ಜಮಾನ ಶುರುವಾಗಿದೆ. ಇದೀಗ ಆನ್ಲೈನ್ ನಲ್ಲಿ ಬಿರಿಯಾನಿ ತರಿಸಿಕೊಂಡು ತಿಂದ ಪರಿಣಾಮ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ.
ಕಾಸರಗೋಡಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಹೊಟೇಲ್ ಒಂದರಿಂದ ಯುವತಿಯೊಬ್ಬಳು ಬಿರಿಯಾನಿ ಆರ್ಡರ್ ಮಾಡಿದ್ದಳು. ಕುಂಜುಮತಿ ಬಿರಿಯಾನಿ ತಿಂದು ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಂಗಳೂರಿನ ಮತ್ತೊಂದಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಯುವತಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.