ತುಮಕೂರು: ಹೆಜ್ಜೇನು ದಾಳಿಯಿಂದಾಗಿ ಕೋಟಿ ಕೋಟಿ ಕುದುರೆಗಳು ಬಲಿಯಾಗಿರುವ ಘಟನೆ ಕುಣಿಗಲ್ ಕುದರೆ ಫಾರ್ಮ್ ಹೌಸ್ ನಲ್ಲಿ ನಡೆದಿದೆ. ಒಂದೊಂದು ಕುದುರೆಯೂ ಒಂದೊಂದು ಕೋಟಿ ಬೆಲೆ ಬಾಳುವಂತ ಕುದರೆಯಾಗಿದೆ. ಅಮೆರಿಕ ಮತ್ತು ಐರ್ಲೆಂಡ್ ನಿಂದ ಈ ಎರಡು ಕುದುರೆಗಳನ್ನು ತರಿಸಲಾಗಿತ್ತು. ಮೇಯಲು ಬಿಟ್ಟಾಗ ಕುದುರೆಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ.
ಕಳೆದ ಬುಧವಾರ ಈ ಘಟನೆ ನಡೆದಿದ್ದು, ಎಂದಿನಂತೆ ಕುದುರೆಗಳನ್ನು ಮೇಯುವುದಕ್ಕೆ ಬಿಟ್ಟದ್ದರಂತೆ. ಈ ವೇಳೆ ಕುದುರೆಗಳ ಮೇಲೆ ಹೆಜ್ಜೇನು ದಾಳಿಯಾಗಿದೆ. ಈ ದಾಳಿಯಿಂದ ಕುದುರೆಗಳು ಕಿರುಚಾಡಿವೆ, ನೋವು ತಾಳಲಾರದೆ ನೆಲಕ್ಕೆ ಬಿದ್ದಿವೆ. ಅಲ್ಲಿಯೇ ಇದ್ದ ಸಿಬ್ಬಂದಿಗಳು ಅದನ್ನು ಗಮನಿಸಿದ್ದು, ತಕ್ಷಣ ಓಡಿ ಬಂದಿದ್ದಾರೆ. ವೈದ್ಯರಿಗೂ ಮಾಹಿತಿ ನೀಡಿದ್ದಾರೆ.
ವೈದ್ಯರು ಕೂಡ ಸ್ಟರ್ಡ್ ಫಾರ್ಮ್ ಹೌಸ್ ನಲ್ಲಿ ಕುದುರೆಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಹೆಜ್ಜೇನು ದಾಳಿ ತೀವ್ರವಾಗಿದ್ದ ಕಾರಣ, ಚಿಕಿತ್ಸೆ ಫಲಕಾರಿಯಾಗದೆ ಕುದುರೆಗಳು ಸಾವನ್ನಪ್ಪಿವೆ. ಕುಣಿಗಲ್ ಸ್ಟರ್ಡ್ ಫಾರ್ಮ್ ಹೌಸ್ ನಲ್ಲಿ ಈ ಎರಡು ಕುದುರೆಗಳು ತುಂಬಾನೇ ಆಕರ್ಷಣೆ ಮಾಡುತ್ತಿದ್ದವು. ಎರಡು ಕೋಟಿ ಬೆಲೆ ಬಾಳುವ ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದ್ದು, ಮಾಲೀಕರಿಗೂ ದುಃಖ ತರಿಸಿದೆ.