ಕಾಂತಾರ ಸಿನಿಮಾದಲ್ಲಿ ದೈವವನ್ನು ಅನುಮಾನಿಸಿ, ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ, ರಕ್ತಕಾರಿ ಸಾವನ್ನಪ್ಪಿದ್ದ. ಇದು ಸಿನಿಮಾದಲ್ಲಿ ಬರುವ ರೀಲ್ ಘಟನೆಯೇ ಸರಿ. ಆದರೆ ಉಡುಪಿಯಲ್ಲಿ ಈ ಘಟನೆ ರಿಯಲ್ ಆಗಿ ನಡೆದಿದೆ. ಅಲ್ಲಿನ ಜನರೆಲ್ಲ ಇದು ದೈವದ ವಿರುದ್ಧ ಹೋಗಿದ್ದಕ್ಕಾಗಿ ಆದ ಸಾವು ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ಮಾಹಿತಿ ಇಲ್ಲಿದೆ. ಉಡುಪಿ ಜಿಲ್ಲೆಯ ಪಡುಹಿತ್ಲು ಜಾರಂದಾಯ ದೈವಸ್ಥಾನದ ದೇವಕೋಲದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮನಸ್ತಾಪವಿತ್ತು. ಈ ದೇವಾಲಯ 500 ವರ್ಷಗಳ ಇತಿಹಾಸವನ್ನು ಹೊಂದಿದೆ. ಕಳೆದ 15 ವರ್ಷಗಳಿಂದಾನು ಪಡುಹಿತ್ಲು ಜಾರಂದಾಯ ಸೇವಾ ಸಮಿತಿ ಇಲ್ಲಿ ಕೆಲಸ ಮಾಡುತ್ತಿದೆ. ಆದರೆ ಸಮಿತಿಯ ವಿರೋಧಿ ಬಣ ಇತ್ತಿಚೆಗೆ ಒಂದು ಸಮಿತಿಯನ್ನು ರಚನೆ ಮಾಡಿತ್ತು.
ಮೂಲಗಳ ಪ್ರಕಾರ ಜರಂದಾಯ ದೈವದ ಕುಟುಂಬಕ್ಕೆ ಸೇರಿದ ಜಯ ಪೂಜಾರಿಯನ್ನು ಮುಂದಿಟ್ಟುಕೊಂಡು ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿತ್ತು ಎನ್ನಲಾಗಿದೆ. ಹೊಸ ಸಮಿತಿಯವರು ಈ ಸಂಬಂಧ ಕೋರ್ಟ್ ಮೊರೆ ಕೂಡ ಹೋಗಿದ್ದಾರೆ. ಹಳೆ ಸಮಿತಿಯವರು ನಮ್ಮ ಕೆಲಸಕ್ಕೆ ಮೂಗು ತೂರಿಸಬಾರದು ಎಂದು ಮನವಿ ಮಾಡಿದ್ದರು. ಕೋರ್ಟ್ ನಿಂದ ತಡೆ ಕೂಡ ತಂದಿದ್ದರು.
ಕೋರ್ಟ್ ನಿಂದ ತಡೆ ತಂದ ಮೇಲೆ ಡಿಸೆಂಬರ್ 24ರಂದು ಕೊಡಮಣಿತ್ತಾಯದಲ್ಲಿ ನಡೆಯುವ ಕೋಲಾಕ್ಕೆ ಹೋಗಿದ್ದರು. ಜಯ ಪೂಜಾರಿ ಹಾಗೂ ಪ್ರವೀಣ್ ಶೆಟ್ಟಿ ಕೋಲದಲ್ಲಿ ಕೋರ್ಟ್ ನಿಂದ ತಂದ ಸ್ಟೇ ಬಗ್ಗೆ ಪ್ರಸ್ತಾಪ ಮಾಡುವವರಿದ್ದರು. ಆದರೆ ಅದಕ್ಕೂ ಮುನ್ನವೇ ಜಯ ಪೂಜಾರಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.