ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವು ಯೋಜನೆಗಳನ್ನು ಪಕ್ಷಗಳು ಜನರಿಗಾಗಿ ಘೋಷಣೆಯನ್ನು ಮಾಡುತ್ತಾರೆ. ಇತ್ತಿಚೆಗಷ್ಟೆ ಕಾಂಗ್ರೆಸ್ ಪಕ್ಷ ನಾವೂ ಈ ಬಾರಿ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿಯನ್ನು ಫ್ರಿಯಾಗಿ ಕೊಡುತ್ತೀವಿ ಎಂದು ಘೋಷನೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಸರ್ಕಾರದಿಂದ ಒಂದು ಕೆಜಿ ಅಕ್ಕಿಯನ್ನು ಹೆಚ್ಚು ಮಾಡಿದೆ.
ಬಿಪಿಎಲ್ ಕಾರ್ಡುದಾರರಿಗೆ ಇಷ್ಟು ದಿನ ತಿಂಗಳಿಗೊಮ್ಮೆ 5 ಕೆಜಿ ಅಕ್ಕಿಯನ್ನು ಸರ್ಕಾರ ಫ್ರಿಯಾಗಿ ಕೊಡುತ್ತಾ ಇತ್ತು. ಇದೀಗ ಆ ನಿಯಮ ಬದಲಾಗಿದೆ. 5 ಕೆಜಿ ಬದಲಿಗೆ 6 ಕೆಜಿ ಅಕ್ಕಿಯನ್ನು ಕೊಡುವುದಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಈ ಸಂಬಂಧ ಆದೇಶ ಕೂಡ ಹೊರಡಿಸಿದೆ.
ಜನವರಿ 1ರಿಂದಾನೇ ಜಾರಿಗೆ ಬರುವಂತೆ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಇಷ್ಟು ದಿನ 5 ಕೆಜಿ ಅಕ್ಕಿ ನೀಡುತ್ತಿದ್ದ ಸರ್ಕಾರ ಈ ತಿಂಗಳಿನಿಂದ 1 ಕೆಜಿಯನ್ನು ಹೆಚ್ಚುವರಿಯಾಗಿ ನೀಡುತ್ತಿದ್ದಾರೆ. ಈ ಸುದ್ದಿ ಬಿಪಿಎಲ್ ಕಾರ್ಡುದಾರರಿಗೆ ಖುಷಿ ನೀಡಿದೆ.