Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಶ್ವಕರ್ಮ ಸಮುದಾಯದ ಯುವ ಜನರಿಗೆ ಶಿಲ್ಪಕಲೆ ಹಾಗೂ ಬಂಗಾರ ಆಭರಣ ತಯಾರಿಕೆ ತರಬೇತಿ‌ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ಚಿತ್ರದುರ್ಗ.ಜ.01: ಕೇಂದ್ರ ಸರ್ಕಾರದ ಯೋಜನೆಯಡಿ ವಿಶ್ವಕರ್ಮ ಸಮುದಾಯದ  ಯುವ ಜನರಿಗೆ ಶಿಲ್ಪಕಲೆ ಹಾಗೂ ಬಂಗಾರ ಆಭರಣ ತಯಾರಿಕೆ ತರಬೇತಿ ನೀಡಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಹ ಒದಗಿಸಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ತ.ರಾ.ಸು ರಂಗಮಂದರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಗರ ಸಭೆ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯದ ಕುಲಕಸುಬುಗಳಾದ ಕಮ್ಮಾರಿಕೆ, ಅಕ್ಕಸಾಲಿಕೆ, ಶಿಲ್ಪಿಕಲೆ, ಮರಗೆಲಸಗಳಿಗೆ  ಪ್ರೋತ್ಸಾಹ ನೀಡಲು ಹಾಗೂ ಆಧುನಿಕ ತಂತ್ರಜ್ಞಾನ ತರಬೇತಿದ ನೀಡಲಾಗುವುದು ಎಂದರು.

ಸರ್ಕಾರ ಕಳೆದ ಹಲವು ವರ್ಷಗಳಲ್ಲಿ ಸಾಧನೆ ಮಾಡಿದ ನಾಡಿನ ವ್ಯಕ್ತಿಗಳನ್ನು ಪ್ರಪಂಚಕ್ಕೆ ಪರಿಚಯಿಸಲು ಜಯಂತಿ ಆಚರಿಸುತ್ತಿದೆ. ಪ್ರಪಂಚದಲ್ಲೇ ಅದ್ಭುತ ಎನಿಸುವ ಶಿಲ್ಪಕಲೆಯನ್ನು ಸೃಷ್ಟಿ ಮಾಡಿದ ಶಿಲ್ಪ ಜಕಣಾಚಾರಿ ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಅವರ ಬಗೆಗಿನ ಐತಿಹ್ಯಗಳು ನಾಡಿನಾದ್ಯಂತ ಪ್ರಚಲಿತವಾಗಿವೆ. ವಿಶ್ವಕರ್ಮ ಸಮುದಾಯಕ್ಕೆ ಸೇರಿದ‌ ವಿವಿಧ ಜಾತಿಗಳ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆಯಿದೆ.

ಆದರೆ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಈ ಸಮುದಾಯಗಳು ಹರಿದು ಹಂಚಿ ಹೋಗಿವೆ. ಗ್ರಾಮೀಣಭಾಗದಲ್ಲಿ ನೆಲೆಸಿದ್ದ ಕುಲಕಸುಬು ಆಧರಿಸಿ ಈ ಸಮುದಾಯಗಳು ನಗರಗಳತ್ತ ವಲಸೆ ಬಂದಿವೆ. ಜೀವನ ನಿರ್ವಹಣೆಗಾಗಿ ಬೇರೆ ವೃತ್ತಿಗಳನ್ನು ಮಾಡುತ್ತಿದ್ದಾರೆ. ಈ ಸಮುದಾಯದ ಜನರು ಒಗ್ಗಟ್ಟಿನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಸಮುದಾಯದ ಮಠಕ್ಕೆ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ವಿಶೇಷ ಯೋಜನೆಗಳನ್ನು ಘೋಷಿಸುತ್ತಾರೆ. ಮುಖ್ಯಮಂತ್ರಿಗಳಿಗೆ ನನ್ನನ್ನು ಸೇರಿ ಅನೇಕ ಶಾಸಕರು ಈ ಕುರಿತು ಶಿಫಾರಸ್ಸು ಮಾಡುತ್ತೆವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ ಮನುಷ್ಯನ ಅಮೂರ್ತ ಭಾವನೆಗಳಿಗೆ ಶಿಲೆಗಳಲ್ಲಿ ಮೂರ್ತಭಾವ ನೀಡುವುದು ಕಷ್ಟದ ಕೆಲಸ. ಶಿಲ್ಪಗಳ ಮೂಲಕವೇ ವಿಶ್ವಕ್ಕೆ ಮಾನ್ಯವಾದ ಕಲೆ ಕೆತ್ತಿದ ಜಕಣಾಚಾರಿ ಅಮರರಾಗಿದ್ದಾರೆ ಎಂದರು.

ಚನ್ನಗಿರಿ ಕಾಶಿಮಠದ ಶ್ರಿಮದ್ ಜಗದ್ಗುರು ವಿಶ್ವಕರ್ಮ ಮಹಾಸಂಸ್ಥಾನ ಸಾವಿತ್ರಿ ಪೀಠದ ಅಷ್ಟೋತ್ತರ ಶತ ಶ್ರೀ ಶಂಕರಾತ್ಮಾನಂದ ಸರಸ್ವತೀ ಮಹಾಸ್ವಾಮಿ ದಿವ್ಯ ಸಾನಿಧ್ಯವಹಿಸುವರು. ನಗರದ ಶಿಲ್ಪಿಗಳಾದ ರಾಮಚಾರಿ, ಕೆ.ಎನ್.ಮಂಜುನಾಥಚಾರ್ ಅವರಿಗೆ ಜಿಲ್ಲಾ ಮಟ್ಟದ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಂಯತಿ ಅಂಗವಾಗ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು‌.ಹುಣಸೆಕಟ್ಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಟಿ.ಎಸ್.ರವಿಶಂಕರ್ ಉಪನ್ಯಾಸ ನೀಡಿದರು. ಚಿತ್ರದುರ್ಗದ ಉಮೇಶ್ ಪತ್ತಾರ ಮತ್ತು ತಂಡದವರು ಗೀತಗಾಯನ ನಡೆಸಿಕೊಡುವರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಿಂದ ಆನೆ ಬಾಗಿಲು, ಗಾಂಧಿವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಮದಕರಿ ವೃತ್ತದಿಂದ ತರಾಸು ರಂಗಮಂದಿರದವರೆಗೆ ಜಾನಪದ ಕಲಾತಂಡಗಳಿಂದ ಮೆರವಣಿಗೆ ಜರುಗಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ,  ಅಖಿಲ ಭಾರತ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣಚಾರ್, ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಪಿ.ತಿಪ್ಪೇಶಾಚಾರ್, ವಿಶ್ವಕರ್ಮ ಸಮಾಜ ಅಧ್ಯಕ್ಷ ಎ.ಶಂಕರಾಚಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನಾಚಾರ್,  ನಗರಸಭೆ ನಾಮ ನಿರ್ದೇಶನ ಸದಸ್ಯ ರಮೇಶಾಚಾರ್, ವಿಶ್ವಕರ್ಮ ಮಹಿಳಾ ಘಟಕದ ಗಾಯಿತ್ರಿದೇವಿ, ವಿಜಯಲಕ್ಷ್ಮೀ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.‌

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬದುಕಿನಲ್ಲಿ ರಂಗಭೂಮಿ ಉತ್ತಮ ಮಾರ್ಗದರ್ಶನ ನೀಡುತ್ತದೆ : ಡಾ.ಬಸವಕುಮಾರ ಸ್ವಾಮೀಜಿ

    ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22: ಜೀವನ ಒಂದು ನಾಟಕರಂಗ ನಾವುಗಳು ಅದರ ಪಾತ್ರಧಾರಿಗಳು. ಬದುಕಿನಲ್ಲಿ ನಾನಾ ಕಷ್ಟಸುಖಗಳು ಬರುತ್ತವೆ. ಅದಕ್ಕೆಲ್ಲಾ ಉತ್ತಮ ಮಾರ್ಗದರ್ಶನ ನೀಡುವುದು ರಂಗಭೂಮಿ ಮಾತ್ರ ಎಂದು ಎಸ್.ಜೆ.ಎಮ್. ವಿದ್ಯಾಪೀಠದ

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

error: Content is protected !!