ನವದೆಹಲಿ: ಹೊಸ ವರ್ಷದ ಖುಷಿಯಲ್ಲಿರುವವರಿಗೆ ತೈಲ ಕಂಪನಿ ಶಾಕ್ ನೀಡಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಒಮ್ಮೆಲೆ 25 ರುಪಾಯಿ ಹೆಚ್ಚಳ ಮಾಡಿದ್ದು, ಇಂದಿನಿಂದಾನೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆ ಸಿಲಿಂಡರ್ ಮೇಲೆ ಯಾವುದೇ ತರದ ಏರಿಕೆಯನ್ನು ಮಾಡಿಲ್ಲ.
ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ ಪದೇ ಪದೇ ಏರಿಕೆಯಾಗುತ್ತಿದ. ಕಳೆದ ವರ್ಷವೂ ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ 153 ರೂಪಾಯಿ ಏರಿಕೆ ಮಾಡಲಾಗಿತ್ತು. ವರ್ಷದ ಮೊದಲ ದಿನವೇ 25 ರೂಪಾಯಿ ಏರಿಕೆ ಮಾಡಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಗಳು ಏರಿಕೆಯಾದರೆ ಹೋಟೆಲ್, ರೆಸ್ಟೋರೆಂಟ್ ಗಳ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಗ್ಯಾಸ್ ಬಳಕೆಮಾಡುವ ಆಟೋ, ಕ್ಯಾಬ್ ಗಳ ಬಳಕೆಯೂ ಹೆಚ್ಚಾಗಬಹುದು.
ಕಳೆದ ವರ್ಷ ಮಾರ್ಚ್ ನಲ್ಲಿ 50 ರೂಪಾಯಿ ಏರಿಕೆಯಾಗಿತ್ತು. ಮೇ ತಿಂಗಳಲ್ಲಿ 3.50 ರೂಪಾಯಿ ಏರಿಕೆಯಾಗಿತ್ತು. ಮತ್ತೆ ಜುಲೈ ತಿಂಗಳಲ್ಲಿ 50 ರೂಪಾಯಿ ಏರಿಕೆಯಾಗಿತ್ತು. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ಅಥವಾ 15ರಂದು ಸಿಲಿಂಡರ್, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತದೆ. ಅದರಂತೆ ಇಂದು ವರ್ಷದ ಆರಂಭದಲ್ಲಿಯೇ ಬೆಲೆ ಏರಿಕೆ ಮಾಡಲಾಗಿದೆ.