Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ವದೇಶಿ ಚಿಂತನೆ ಹೆಚ್ಚಿಸಿಕೊಂಡು ವಿದೇಶಿ ವ್ಯಾಮೋಹದಿಂದ ಹಿಂದೆ ಸರಿಯಬೇಕು : ಆರ್. ವಿಜಯಕೃಷ್ಣ

Facebook
Twitter
Telegram
WhatsApp

ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್

ಸುದ್ದಿಒನ್, ಚಿತ್ರದುರ್ಗ, (ಅ.03) : ವಿದೇಶಿ ವಸ್ತುಗಳಿಗೆ ಆಕರ್ಷಿತರಾಗಿ ಮನೆಯ ಆಹಾರ ಪದ್ದತಿ, ರುಚಿ, ವೈಶಿಷ್ಠ್ಯ ಮರೆಯಾಗಿದೆ. ಕೂಡು ಕುಟುಂಬ ಹಾಳಾಗುತ್ತಿದೆ. ಸಣ್ಣ ಸಣ್ಣ ಚಿಂತನೆಗಳನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡು ಸ್ವದೇಶಿ ವಸ್ತುಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸ್ವದೇಶಿ ಜಾಗರಣ ಮಂಚ್ ಪ್ರಾಂತ ಸಂಯೋಜಕ ಆರ್. ವಿಜಯಕೃಷ್ಣ ಹೇಳಿದರು.

ಸ್ವದೇಶಿ ಜಾಗರಣ ಮಂಚ್ ಜಿಲ್ಲೆ ವತಿಯಿಂದ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಿಲ್ಲಾ ವಿಚಾರ ವರ್ಗದಲ್ಲಿ ಭಾಗವಹಿಸಿ ಮಾತನಾಡಿದರು.

ಕುಟುಂಬದಲ್ಲಿ ಅನ್ಯೋನ್ಯತೆ ಎನ್ನುವುದೇ ಇಲ್ಲದಂತಾಗಿದೆ. ಆಂಟಿ, ಅಂಕಲ್ ಸಂಸ್ಕೃತಿ ಮೆರೆಯುತ್ತಿದೆ. ಸ್ವದೇಶಿ ಚಿಂತನೆ ಎನ್ನುವುದು ಕೇವಲ ವಸ್ತುಗಳಿಗೆ ಮಾತ್ರ ಸೀಮಿತವಲ್ಲ. ಪ್ರತಿನಿತ್ಯ ಜೀವನದ ಎಲ್ಲಾ ಭಾಗಗಳಲ್ಲಿಯೂ ಇರಬೇಕು.

ಪ್ಲಾಸ್ಟಿಕ್ ಬಾಟಲ್‍ಗಳ ಬಳಕೆ, ರಾಸಾಯನಿಕ ಗೊಬ್ಬರ ಬಳಸಿ ಬೆಳೆಯುವ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಪರಿಸರವನ್ನು ನಾಶಗೊಳಿಸುತ್ತಿದೆ. ಮನೆಯ ಹತ್ತಿರವೇ ಇರುವ ಅಂಗಡಿಗಳಿಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸುವ ಪದ್ದತಿ ಮಾಯವಾಗಿ ಆನ್‍ಲೈನ್‍ನಿಂದ ಖರೀಧಿಸುವ ಹವ್ಯಾಸಿ ರೂಡಿಯಾಗಿದೆ.

ಇ.ಕಾಮರ್ಸ್‍ನಲ್ಲಿ ಮೋಸ ನಡೆಯುತ್ತಿದೆ. ಬಯರಾಷ್ಟ್ರೀಯ ಕಂಪನಿಗಳ ವಂಚನೆ ವಿರುದ್ದ ಎಚ್ಚರಿಕೆಯಿಂದ ಇರಬೇಕು. ಇಂಗ್ಲಿಷ್ ವ್ಯಾಮೋಹದಿಂದ ಮಾತೃಭಾಷೆಯನ್ನು ಬಳಸುವವರೆ ಕಡಿಮೆಯಾಗಿದ್ದಾರೆ. ಜಾಹಿರಾತುಗಳು ಎಂದಿಗೂ ಸತ್ಯವನ್ನು ಹೇಳುವುದಿಲ್ಲ. ಹಾಗಾಗಿ ಸ್ವದೇಶಿ ಚಿಂತನೆ ಹೆಚ್ಚಿಸಿಕೊಂಡು ವಿದೇಶಿ ವ್ಯಾಮೋಹದಿಂದ ಹಿಂದೆ ಸರಿಯಬೇಕಿದೆ ಎಂದು ಹೇಳಿದರು.

ಆಂಗ್ಲರು ನಮ್ಮ ದೇಶಕ್ಕೆ ಕಂಪನಿ ತೆರೆಯಲು ಬಂದವರು ಕೊನೆಗೆ ನಮ್ಮ ದೇಶ ಆಳಿದರು. ಒಂದು ಕಂಪನಿಯನ್ನು ಒಳಗೆ ಬಿಟ್ಟುಕೊಂಡಿದ್ದಕ್ಕೆ ಈಗ ಎಷ್ಟು ಕಂಪನಿಗಳು ನಮ್ಮಲಿವೆ ಎನ್ನುವುದನ್ನು ಊಹಿಸಲು ಆಗಲ್ಲ. ಮುಂದೊಂದು ದಿನ ವ್ಯಾಪಾರವೇ ಯುದ್ದಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ.

ಜಪಾನ್‍ನಲ್ಲಿ ಶೇ.96 ರಷ್ಟು ಕಾರನ್ನು ಅಲ್ಲಿಯೇ ಉತ್ಪಾದಿಸಿ ಬಳಸಲಾಗುತ್ತಿದೆ. ತಜ್ಞರು ಹೇಳುವ ಪ್ರಕಾರ ಭಾರತ ಯಾವ ವಸ್ತುವನ್ನು ವಿದೇಶಕ್ಕೆ ಕಳಿಸುತ್ತದೋ ಅದನ್ನೆ ಮತ್ತೆ ತರಿಸಿಕೊಳ್ಳುತ್ತಿದೆ. ನಮ್ಮಲ್ಲೆ ಉತ್ಪಾದನೆಯಾಗುವುದನ್ನು ಖರೀದಿಸಿದಾಗ ಮಾತ್ರ ಸ್ವದೇಶಿ ವಸ್ತುಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ನಮ್ಮ ಸುತ್ತಮುತ್ತಲು ಏನು ಬೆಳೆಯುತ್ತದೆ. ಯಾವ ವಸ್ತು ಉತ್ಪಾದನೆಯಾಗುತ್ತದೋ ಅದಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ತಿಳಿಸಿದರು.

ಸ್ವದೇಶಿ ಜಾಗರಣ ಮಂಚ್ ಕ್ಷೇತ್ರೀಯ ಸಂಘಟಕರು, ಪ್ರಚಾರಕರಾದ ಕೆ.ಜಗದೀಶ ನಿರುದ್ಯೋಗ ಸಮಸ್ಯೆಗಳು ಪರಿಹಾರ ಮಾರ್ಗಗಳು ಎನ್ನುವ ವಿಚಾರ ಕುರಿತು ಮಾತನಾಡುತ್ತ ದೇವ ಹಲವು ನಾಮ ಒಂದೆ. ನಾವು ಯಾವ ಧರ್ಮದ ವಿರೋಧಿಗಳಲ್ಲ. ಆದರೆ ಲವ್ ಜಿಹಾದ್, ಮತಾಂತರಕ್ಕೆ ನಮ್ಮ ವಿರೋಧವಿದೆ. ಏಸುಕ್ರಿಸ್ತ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರಿದರು. ನೆರೆಹೊರೆಯವರನ್ನು ಪ್ರೀತಿಸಬೇಕು ಎನ್ನುವುದು ಅವರ ಚಿಂತನೆಯಾಗಿತ್ತು. ಆದರೆ ಈಗಿನ ಕೆಲವು ಫಾದ್ರಿಗಳು ಬಲವಂತವಾಗಿ ಮತಾಂತರ ಮಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ.

ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿರುವುದರಿಂದ ಇಲ್ಲ ಸಲ್ಲದ ಆಸೆ ಆಮಿಷಗಳನ್ನು ಕೆಲವರು ಒಡ್ಡುತ್ತಿದ್ದಾರೆಂದರು. ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್‍ನಲ್ಲಿ ಪಾಕಿಸ್ತಾನ ಗೆದ್ದರೆ ಜೈಕಾರ ಹಾಕಿ ಪಟಾಕಿ ಸಿಡಿಸುವವರು ನಮ್ಮ ದೇಶದಲ್ಲೇಕಿರಬೇಕು. ಪಾಕಿಸ್ತಾನಕ್ಕೆ ಹೋಗಲಿ. ಭಾರತದ ಮೌಲ್ಯ, ಸಂಸ್ಕøತಿಯನ್ನು ಗೌರವಿಸದವರ ಅವಶ್ಯಕತೆಯಿಲ್ಲ ಎಂದು ದೇಶ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ವಿದ್ಯಾವಂತ ಯುವಕರು ಉದ್ಯೋಗ ಹುಡುಕುವುದರಲ್ಲಿಯೇ ಕಾಲ ಕಳೆಯುತ್ತಾರೆಯೇ ವಿನಃ ಸ್ವ-ಉದ್ಯೋಗ ಆರಂಭಿಸಿ ಹತ್ತು ಮಂದಿಗೆ ಉದ್ಯೋಗ ಕೊಡುವ ಸಾಹಸಕ್ಕೆ ಏಕೆ ಮನಸ್ಸು ಕೊಡುವುದಿಲ್ಲ. ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಭೂಮಿ ಹಾಳಾಗುತ್ತಿದೆ. ಸಾವಯುವ ಕೃಷಿಯಿಂದ ಆರೋಗ್ಯಕ್ಕೆ ಎಷ್ಟು ಉಪಕಾರಿ ಎನ್ನುವುದನ್ನು ಏಕೆ ಮರೆತಿದ್ದೇವೆ. ಜಾಹಿರಾತುಗಳು ಬ್ರಾಂಡ್ ಮಾಡುತ್ತವೆ ಹೊರತು ಗುಣಾತ್ಮಕವನ್ನು ಎಂದಿಗೂ ಪರಿಚಯಿಸುವುದಿಲ್ಲ.

ನಿತ್ಯ ಬೇಕಾಗಿರುವ ಸ್ವದೇಶಿ ವಸ್ತುಗಳನ್ನು ಎಲ್ಲರೂ ಬಳಸಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸ್ವ-ಉದ್ಯೋಗ ಮಾಡುವ ಬದ್ದತೆ ಬೆಳೆಸಿಕೊಳ್ಳಬೇಕು. ಪದವಿ ಶಿಕ್ಷಣದ ಜೊತೆ ಕೌಶಲ್ಯಾಯಾಧಾರಿತ ಶಿಕ್ಷಣ ವಿಶ್ವವಿದ್ಯಾನಿಲಯಗಳಲ್ಲಿ ಸಿಗುವಂತಾಗಬೇಕು. ಅದಕ್ಕಾಗಿ ಸರ್ಕಾರ ಪೂರಕ ನೀತಿ ರೂಪಿಸಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿ ಎನ್.ಬಿ.ವಿಶ್ವನಾಥ್ ಮಾತನಾಡಿ ರೈತರು ವಾಹನಗಳ ದಾಖಲಾತಿ, ಆಸ್ತಿಗಳ ದಾಖಲಾತಿ ಹಾಗೂ ಪಾಲುವಿಭಾಗಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಚಾಲನಾ ಪರವಾನಗಿ ಪತ್ರ, ಇನ್ಸೂರೆನ್ಸ್ ಅತ್ಯವಶ್ಯಕವಾಗಿರಬೇಕು. ಒಂದು ವೇಳೆ ಆಕಸ್ಮಿಕವಾಗಿ ಅಪಘಾತವಾದಾಗ ಹತ್ತಾರು ಸಮಸ್ಯೆಗಳು ಎದುರಾಗುತ್ತದೆ ಎಂದು ಕಾನೂನಿಗೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳೆ ಬೆಳೆಯಬೇಕೆಂಬ ಆಸೆಯಿಂದ ಹೈಬ್ರಿಡ್ ಬೆಳೆಗಳಿಗೆ ಸಿಕ್ಕಷ್ಟು ಪ್ರೋತ್ಸಾಹ ಸಾವಯವ ಕೃಷಿಗೆ ಸಿಗುತ್ತಿಲ್ಲ. ರಾಸಾಯನಿಕ ಬಳಕೆಯಿಂದ ಫಲವತ್ತಾದ ಕೃಷಿ ಭೂಮಿ ವಿಷವಾಗುತ್ತಿದೆ. ವಿದೇಶಿ ವಸ್ತುಗಳ ಬಳಕೆ ಕಮ್ಮಿ ಮಾಡಿ ಸ್ವದೇಶಿ ವಸ್ತುಗಳನ್ನು ನಿತ್ಯ ಜೀವನದಲ್ಲಿ ಬಳಸುವುದನ್ನು ಅಳವಡಿಸಿಕೊಂಡರೆ ಗಾಂಧಿಜಿರವರ ರಾಜರಾಜ್ಯದ ಕನಸು ನನಸಾಗಲಿದೆ ಎಂದರು.

ಸ್ವಾವಯವ ಕೃಷಿಕರ ಅನುಭವಗಳು ಕುರಿತು ಸಾವಯವ ಕೃಷಿಕ ಭಾರತೀಯ ಕಿಸಾನ್ ಸಂಘ ಚಿತ್ರದುರ್ಗ ಶಾಖೆಯ ಜ್ಞಾನೇಶ್, ಸಣ್ಣ ಕೈಗಾರಿಕೆಯ ಅನುಭವಗಳ ಕುರಿತು ಹೊಸದುರ್ಗ ಸದ್ಗುರು ಆಯುರ್ವೇದ ಉತ್ಪನ್ನಗಳ ಪ್ರದೀಪ್ ಇವರುಗಳು ಮಾತನಾಡಿದರು.

ಸ್ವದೇಶಿ ಜಾಗರಣ ಮಂಚ್ ಜಿಲ್ಲಾ ಸಂಚಾಲಕ ರವೀಂದ್ರ ಜಿಲ್ಲಾ ವಿಚಾರ ವರ್ಗದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

error: Content is protected !!