ಮಂಡ್ಯ: ಇಂದು ಬಿಜೆಪಿಯ ಜನಸಂಕಲ್ಪ ಯಾತ್ರೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಭಾಗಿಯಾಗಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದ ನಂತರ ಸಿಟಿ ರವಿ ಗರಂ ಆಗಿದ್ದಾರೆ. ನಮ್ಮ ಸರ್ಕಾರ ಮಂಡ್ಯಕ್ಕೆ ಏನು ಕಡಿಮೆ ಮಾಡಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಯಾವತ್ತು ಜಾತಿ ಆಧಾರದ ಮೇಲೆ ಯೋಜನೆ ಮಾಡಿಲ್ಲ. ಹಾಲಿಗೆ ಸಹಾಯ ಧನ ನೀಡಿದ್ದು ಕಾಂಗ್ರೆಸ್ ಅಲ್ಲ, ಯಡಿಯೂರಪ್ಪ ಅವರ ಸರ್ಕಾರ. ಎಲ್ಲಾ ಯೋಜನೆಯನ್ನು ಬಡವರ ಕಲ್ಯಾಣಕ್ಕಾಗಿಯೇ ನೀಡಿದೆ. ನಾನು ನಿಮ್ಮ ಬಳಿ ನ್ಯಾಯ ಕೇಳಲು ಬಂದಿದ್ದೇನೆ. ನಮ್ಮ ಸರ್ಕಾರದ ಯೋಜನೆಯನ್ನು ನಿಮ್ಮ ಬಳಿ ಇಟ್ಟು ನ್ಯಾಯ ಕೇಳಲು ಬಂದಿದ್ದೀನಿ. ಈ ಬಾರಿಯ ಚುನಾವಣೆ ಟಿಪ್ಪು ವರ್ಸಸ್ ಒಡೆಯರ್ ನಡುವಿನ ಚುನಾವಣೆಯಾಗಿರಲಿದೆ.
ನಿಮ್ಮ ವೋಟು ಮೂಡಲಬಾಗಿಲು ಹನುಮಪ್ಪನಿಗೆ ಹಾಕಬೇಕು. ಮುಂದಿನ ಬಾರಿ ಅದೇ ಆಗಿ ಹುಟ್ಟುತ್ತೇನೆ ಎಂಬುವವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಮಂಡ್ಯಕ್ಕೆ ನೀರು ಕೊಟ್ಟಿದ್ದು ಟಿಪ್ಪು ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರು. ಆದರೆ ಕೆಲವರು ಟಿಪ್ಪು ನಮ್ಮಪ್ಪನಿಗಿಂತಾ ಅನ್ನೋ ರೀತಿ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.