ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಡಿ.27): ನಗರದ ಪಂಚಾಚಾರ್ಯ ಕಲ್ಯಾಣ ಮಂಟಪ ಮುಂಭಾಗ ಡಬ್ಬಲ್ ರಸ್ತೆಗೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಯಿತು.
ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿ.ಕೆ.ಗೌಸ್‍ಪೀರ್ ಮಂಗಳವಾರ ಡಾ.ವಿಷ್ಣುವರ್ಧನ್ ರಸ್ತೆ ನಾಮಫಲಕವನ್ನು ಉದ್ಘಾಟಿಸಿ ಮಾತನಾಡುತ್ತ 2018 ರಲ್ಲಿಯೇ ರಾಜ್ಯ ಸರ್ಕಾರದಿಂದ ಆದೇಶವಾಗಿದ್ದರೂ ಕಾರಣಾಂತರಗಳಿಂದ ರಸ್ತೆಗೆ ವಿಷ್ಣುವರ್ಧನ್ ಹೆಸರನ್ನು ಇಟ್ಟಿರಲಿಲ್ಲ. ನಾಗರಹಾವು ಚಿತ್ರದ ಮೂಲಕ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ನಾಡಿಗೆ ಪರಿಚಯಿಸಿದ ಡಾ.ವಿಷ್ಣುವರ್ಧನ್ ಚಿತ್ರರಂಗ ಪ್ರವೇಶಿಸಿ ಇಂದಿಗೆ ಐವತ್ತು ವರ್ಷಗಳಾಗಿರುವ ಸವಿನೆನಪಿಗಾಗಿ ಮದಕರಿನಾಯಕನ ಪ್ರತಿಮೆ ಮುಂಭಾಗದಿಂದ ಚಳ್ಳಕೆರೆ ಟೋಲ್‍ಗೇಟ್ ಕೂಡುವ ರಸ್ತೆವರೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂಬ ಹೆಸರಿಡಲಾಗಿದೆ. ಎಂದು ಹೇಳಿದರು.
ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್ ಆದರ್ಶ ಬಳಗದ ಪುನಿತ್ ಕಬ್ಬಿಣದ, ಬಾಬು, ಶೇಖ್ ಅಹಮದ್, ರವಿ, ನಾಗೇಶ್, ಬಿ.ಸಿ.ನಾಗರಾಜಚಾರಿ, ತಿಪ್ಪೇಸ್ವಾಮಿ, ರಾಜೇಶ್, ಪ್ರವೀಣ್, ಶೇಖ್ ಕಲೀಂವುಲ್ಲಾ, ಮಹಮದ್ ಜಿಕ್ರಿಯಾವುಲ್ಲಾ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
ಬರಗೇರಮ್ಮ ದೇವಸ್ಥಾನದ ಪೂಜಾರಿ ನಾಗೇಶ್ ಸಿಹಿ ವಿತರಿಸಿದರು.