Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ನಗರದ 23 ಪಾರ್ಕ್‌ಗಳ ಅಭಿವೃದ್ದಿಗೆ ಹತ್ತು ಕೋಟಿ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಡಿ.26): ನಗರದಲ್ಲಿ 23 ಪಾರ್ಕ್‍ಗಳ ಅಭಿವೃದ್ದಿಗೆ ಹತ್ತು ಕೋಟಿ ರೂ.ಗಳನ್ನು ನೀಡಿದ್ದೇನೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ಧವಳಗಿರಿ ಬಡಾವಣೆ ಎರಡನೆ ಹಂತದಲ್ಲಿರುವ ಉದ್ಯಾನವನದ ನವೀಕರಣ ಹಾಗೂ ಹದಿನೇಳು ಎಲ್.ಇ.ಡಿ. ಬಲ್ಬ್‍ಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಶಾಸಕರು ಹದಿನೆಂಟರಿಂದ ಇಪ್ಪತ್ತು ಲಕ್ಷ ರೂ. ಖರ್ಚು ಮಾಡಿ ಈ ಉದ್ಯಾನವನ್ನು ನವೀಕರಣಗೊಳಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.

ಧವಳಗಿರಿ ಬಡಾವಣೆಯ ನಿವಾಸಿಗಳು ಈ ಪಾರ್ಕ್‍ನ್ನು ಸುಂದರ ಹಾಗೂ ಸ್ವಚ್ಚವಾಗಿಟ್ಟುಕೊಂಡಿರುವುದು ನಿಜಕ್ಕೂ ಸಂತೋಷ ತರುತ್ತಿದೆ. ಇಲ್ಲಿ ಪಕ್ಕದಲ್ಲಿಯೇ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಖಾಲಿ ಜಾಗವಿದೆ. ಅಲ್ಲಿ ಒಂದು ತಿಂಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ನಗರದ ಎಲ್ಲಾ ಕಡೆ ರಸ್ತೆ ಅಗಲೀಕರಣವಾಗಿದೆ.

ಬೆಂಗಳೂರಿನ ಲಾಲ್‍ಬಾಗ್‍ನಿಂದ 28 ಸಾವಿರ ಅಲಂಕಾರಿಕ ಗಿಡಗಳನ್ನು ತರಿಸಿ ಡಿವೈಡರ್ ಮಧ್ಯೆ ನೆಡಲಾಗುತ್ತಿದೆ. ಐದುನೂರು ಕೋಟಿ ರೂ.ಗಳಲ್ಲಿ ನಗರದ ಅಭಿವೃದ್ದಿಯಾಗುತ್ತಿದೆ ಎಂದು ಹೇಳಿದರು.

ನಗರೋತ್ಥಾನ ಅಡಿ ನಲವತ್ತು ಕೋಟಿ ರೂ.ಗಳನ್ನು ನೀಡಿದ್ದೇನೆ. ಆಶ್ರಯ ಲೇಔಟ್‍ಗೆ ಒಂದುವರೆ ಕೋಟಿ ರೂ. ಕೊಟ್ಟಿದೆ. ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸುವುದಕ್ಕಾಗಿ ಪೂನಾದವರಿಗೆ ಟೆಂಡರ್ ನೀಡಲಾಗಿದೆ.

ಎರಡನೆ ಹಂತದ ಕುಡಿಯುವ ನೀರಿಗೆ 240 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ನಗರದಲ್ಲಿರುವ ಎಲ್ಲಾ ಪಾರ್ಕ್‍ಗಳು ಅಭಿವೃದ್ದಿಯಾಗುತ್ತಿವೆ. ನನ್ನ ಕ್ಷೇತ್ರಕ್ಕೆ 183 ಹಳ್ಳಿಗಳು ಸೇರುತ್ತವೆ. ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲಾ ಕಡೆ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಎರಡು ವರ್ಷಗಳ ಹಿಂದೆ ಕೊರೋನಾ ಬಂದಾಗ ಬಲಿಷ್ಠ ದೇಶಗಳು ಇನ್ನು ಅದರಿಂದ ಹೊರಬರಲು ಆಗುತ್ತಿಲ್ಲ. ಆದರೆ ನಮ್ಮ ದೇಶದ ಪ್ರಧಾನಿ ಮೋದಿರವರು ಉಚಿತವಾಗಿ ಲಸಿಕೆಗಳನ್ನು ಒದಗಿಸಿದ್ದರಿಂದ ಸಾವು-ನೋವಿನ ಪ್ರಮಾಣ ಕಡಿಮೆಯಿದೆ.

ಯಾರು ಹಸಿವಿನಿಂದ ಬಳಬಾರದೆಂದು 81 ಕೋಟಿ ಜನರಿಗೆ ಉಚಿತ ಅಕ್ಕಿ, ಗೋಧಿಯನ್ನು ಈಗಲೂ ನೀಡುತ್ತಿದ್ದಾರೆ. ಅದೇ ಪಾಕಿಸ್ತಾನ, ಶ್ರೀಲಂಕಾದವರು ಅಕ್ಕಿಗೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿದೆ ಎನ್ನುವುದಾದರೆ ಅದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ಬಣ್ಣಿಸಿದರು.

ಉಕ್ರೇನ್, ರಷ್ಯಾ ಯುದ್ದದಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ಅಮೇರಿಕಾದ 24 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದು ಜೀವ ಉಳಿಸಿದ ಎದೆಗಾರಿಕೆ ನಮ್ಮ ದೇಶದ ಪ್ರಧಾನಿ ಮೋದಿಯವರದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಜಿ-20 ಶೃಂಗ ಸಭೆಯ ಅಧ್ಯಕ್ಷತೆ ಕೂಡ ಸಿಕ್ಕಿದೆ ಎಂದರೆ ಸುಲಭದ ಮಾತಲ್ಲ ಎಂದು ಶ್ಲಾಘಿಸಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ, ಸದಸ್ಯರುಗಳಾದ ರೇಖ, ಉಷ, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಉಪಾಧ್ಯಕ್ಷ ಸಂಪತ್, ಖಜಾಂಚಿ ಮಾಧುರಿ ಗಿರೀಶ್, ನಗರಸಭೆ ಸದಸ್ಯರುಗಳಾದ ಬಾಲಮ್ಮ, ಪೊಲೀಸ್ ಮಲ್ಲಿಕಾರ್ಜುನ್, ದವಳಗಿರಿ ಬಡಾವಣೆಯ ನಿವಾಸಿ ನ್ಯಾಯವಾದಿ ಎಂ.ಸಿ.ತಿಪ್ಪೇಸ್ವಾಮಿ, ನಾಗರಾಜ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್ ವೇದಿಕೆಯಲ್ಲಿದ್ದರು.
ದವಳಗಿರಿ ಬಡಾವಣೆಯ ನಿವಾಸಿಗಳಾದ ಸಿ.ಜಿ.ಶ್ರೀನಿವಾಸ್, ಜೆ.ಎಸ್.ಗುರುಮೂರ್ತಿ, ಎಲ್.ಷಣ್ಮುಖ, ಬಿ.ಸಿ.ಕುಮಾರ್, ವಕೀಲ ಅನಿಲ್‍ಕುಮಾರ್, ಅಶ್ರಫ್, ಜಯಣ್ಣ, ಈಶ್ವರಪ್ಪ, ರಾಜಣ್ಣ, ಹೊರಕೆರಂಗಪ್ಪ, ಡಾ.ಚನ್ನಕೇಶವ, ಓ.ಬಿ.ಬಸವರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್‍ನಾಯ್ಕ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!