ಬೆಂಗಳೂರು: ಚೀನಾದಲ್ಲಿ ಕೊರೊನಾ ರೂಪಾಂತರಿ ತಳಿ ಆತಂಕ ಹೆಚ್ಚು ಮಾಡಿದೆ. BF.7 ವೈರಸ್ ಅತಿ ವೇಗದಲ್ಲಿ ಹರಡುವಂತ ವೈರಸ್ ಆಗಿದೆ. ಹೀಗಾಗಿ ಸಹಜವಾಗಿಯೇ ಆತಂಕ ಆರಂಭವಾಗಿದೆ. ಚೀನಾದಲ್ಲಂತು ಆಸ್ಪತ್ರೆಯ ಬೆಡ್ ಗಳಿಲ್ಲದೆ ಬೀದಿ ಬೀದಿಯಲ್ಲಿ ಜನ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ಅತಿ ವೇಗದಲ್ಲಿ ಹರಡುವ ವೈರಸ್ ಬಗ್ಗೆ ಎಲ್ಲಾ ದೇಶದಲ್ಲೂ ಮುಂಜಾಗ್ರತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೀಗ ಕರ್ನಾಟಕಕ್ಕೂ ವೈರಸ್ ಬಂತಾ ಎಂಬ ಭಯ ಶುರುವಾಗಿದೆ. ವಿದೇಶದಿಂದ ಬೆಂಗಳೂರಿಗೆ ಬಂದ ಏಳು ಜನರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. 24 ಗಂಟೆಗಳಲ್ಲಿ ಏರ್ಪೋರ್ಟ್ ನಲ್ಲಿ 7 ಪ್ರಕರಣಗಳು ಕಂಡು ಬಂದಿದೆ. ಇದು ರೂಪಾಂತರಿ BF.7 ತಳೀನಾ ಎಂಬುದು ಇನ್ನು ದೃಢವಾಗಿಲ್ಲ. ಸದ್ಯಕ್ಕೆ ಪಾಸಿಟಿವ್ ಬಂದವರ ಸ್ವ್ಯಾಬ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಲ್ಯಾಬ್ ನಿಂದ ವರದಿ ಬಂದ ಬಳಿಕ ವೈರಸ್ ಯಾವ ಮಾದರಿಯದ್ದು ಎಂಬುದು ಗೊತ್ತಾಗಲಿದೆ. ಇನ್ನು ಈಗಾಗಲೇ ಸೋಂಕಿತರ ಮೇಲೆ ನಿಗಾ ಇಡಲಾಗಿದೆ. ಅವರ ಸಂಕರ್ಕದಲ್ಲಿದ್ದವರ ಮೇಲೂ ನಿಗಾ ಇಡಲಾಗಿದೆ.