ಬೆಂಗಳೂರು: ಪಾರಿಜಾತ ನಿವಾಸದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಸುದ್ದಿಗೋಷ್ಟಿ ನಡೆಸಿ, ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ತನಗೆ ಒಲಿದು ಬಂದಿದ್ದಂತ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟ ಬಗ್ಗೆಯೂ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೆಡ್ಡಿ, 2004ರಲ್ಲಿ ಕರುಣಾಕರ ರೆಡ್ಡಿ ಬಿಜೆಪಿಯಿಂದ ಎಂಪಿ ಆದ್ರೂ. 2005ರಲ್ಲಿ ಗ್ರಾಮ ಪಂಚಾಯತಿಯಲ್ಲಿಯೂ ಜಯ ಸಿಕ್ಕಿತು. ಇಡೀ ಜಿಲ್ಲೆಯನ್ನು ಬಿಜೆಪಿಮಯ ಮಾಡಿದ್ದು ನಾವೇ. ಆಗ ಯಡಿಯೂರಪ್ಪ ಅವರನ್ನು ಕರೆತಂದು ಸರ್ಕಾರ ಮಾಡೋಣಾ ಅಂತ ಹೇಳಿದ್ರು. ಜೊತೆಯಲ್ಲಿ ಇರಬೇಕು ಎಂದಾಗ ನಾನು ಒಪ್ಪಿದೆ.
2006ರಲ್ಲಿ 20-20 ಸರ್ಕಾರ ಬಂತು. ಆಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಲು ಹೇಳಿದರು. ನಾನು ವಿನಮ್ರವಾಗಿ ಸಚಿವ ಸ್ಥಾನ ತಿರಸ್ಕರಿಸಿದೆ. ಹಿಂದುಳಿದ ವರ್ಗದ ರಾಮುಲುರನ್ನು ಸಚಿವನಾಗಿ ಮಾಡಲು ಹೇಳಿದ್ದೆ. ಬಿಎಸ್ವೈ ರಾಮುಲುರನ್ನು ಸಚಿವರನ್ನಾಗಿ ಮಾಡಿದರು. ಶ್ರೀರಾಮುಲು ಬೇರೆ ಅಲ್ಲ, ನಾನು ಬೇರೆ ಅಲ್ಲ. ನಾನು ಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.