ಬೆಂಗಳೂರು: ರಾಜಕೀಯದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ರೆಡಿಯಾಗಿರುವ ಜನಾರ್ದನ ರೆಡ್ಡಿ ಇಂದು ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ತನ್ನ ಸ್ನೇಹಿತನ ಬಗ್ಗೆ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ರಾಮುಲು ನಾನು ಚಿಕ್ಕಂದಿನಿಂದಲೂ ಸ್ನೇಹಿತರು. ಶ್ರೀರಾಮುಲು ಮಾವ ರಾಜಕೀಯದಲ್ಲಿದ್ದರು. ಬಳ್ಳಾರಿಯಲ್ಲಿ ಮಾವನ ಕೊಲೆ ಆಯ್ತು. ಮಾವನ ಕೊಲೆಯ ಬಳಿಕ ರಾಮುಲು ರಾಜಕೀಯ ಶುರು ಮಾಡಿದರು. ರಾಮುಲು ಮೇಲೇಯೂ ವೈರಿಗಳು ಕಣ್ಣಿಟ್ಟಿದ್ದರು. ರಾಮುಲು ನಾನು ಹೋಗಿ ನಾಮ ಪತ್ರ ಸಲ್ಲಿಸಿದೆವು.
ಆಗ ಇಬ್ಬರು ಸುಷ್ಮಾ ಸ್ವರಾಜ್ ಸಂಪರ್ಕಕ್ಕೆ ಸಿಕ್ಕಿದೆವು. ನಮಗೆ ಸುಷ್ಮಾ ಸ್ವರಾಜ್ ತಾಯಿಯಂತೆ ಕಂಡರು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದರು. ಮನೆ ಮನೆಗೆ ಹೋಗಿ ಬಿಜೆಪಿ ತಲುಪಿಸುವ ಕೆಲಸ ಮಾಡಿದೆವು. ಸುಷ್ಮಾ ಸ್ವರಾಜ್ ಜೊತೆಗೂ ಚುನಾವಣೆ ಕೆಲಸ ಮಾಡಿದೆವು. ಸುಷ್ಮಾ ಸ್ವರಾಜ್ ಸೋಲು ತುಂಬಾ ನೋವು ತಂದಿತ್ತು.
ಅಂದು ಬೊಮ್ಮಾಯಿ ಜೆಡಿಯು ನಲ್ಲಿದ್ದರು. ಬೊಮ್ಮಾಯಿ ಅವರು ಜೆಡಿಯುನಲ್ಲಿದ್ದಾಗ ನನ್ನನ್ನು ಪಕ್ಷಕ್ಕೆ ಕರೆದಿದ್ದರು. ಆದರೆ ಬಿಜೆಪಿ ಬಿಟ್ಟು ಬರಲ್ಲ ಎಂದು ಹೇಳಿದ್ದೆ. ಬಿಜೆಪಿಗಾಗಿ ನಾನು ನಿಸ್ವಾರ್ಥದಿಂದ ಸೇವೆ ಮಾಡಿದ್ದೇನೆ ಎಂದಿದ್ದಾರೆ.