ಬಾಗಲಕೋಟೆ : ಡಿಸೆಂಬರ್ 25 ರಂದು ಜಿಲ್ಲಾ ಮಟ್ಟದ ‌ವಿಕಲಚೇತನ ನೌಕರರ ಸಭೆ

suddionenews
1 Min Read

 

ಬಾಗಲಕೋಟೆ : ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಭೆಯನ್ನು  ಡಿಸೆಂಬರ್ 25 ಭಾನುವಾರ ಬೆಳಗ್ಗೆ 11  ಗಂಟೆಗೆ ಬಾಗಲಕೋಟ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.ನಂ.15 ರಸ್ತೆಯ ನಂ.15ವಿದ್ಯಾಗಿರಿ,ಕೆಂಚಮ್ಮನ ಗುಡಿ ಹತ್ತಿರ ಇರುವ ಶಾಲೆಯಲ್ಲಿ ಬಾಗಲಕೋಟ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಭೆಯನ್ನು ಆಯೋಜನೆ ಮಾಡಲಾಗಿದೆ.

ಸಭೆಗೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ.ಎಸ್. ಲಮಾಣಿ,ಬೆಳಗಾವಿಯ ವಿಭಾಗದ ಕಾರ್ಯದರ್ಶಿ ಚಂದ್ರು ಸಿದ್ದಗೊಂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾ ಘಟಕದ ಪುನರ್ ರಚನೆ ಸೇರಿದಂತೆ ವಿಕಲಚೇತನ ನೌಕರರ ವಿವಿಧ ಬೇಡಿಕೆಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಆದ್ದರಿಂದ  ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ವಿಕಲಚೇತನ ನೌಕರರು ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಜಿಲ್ಲಾಧ್ಯಕ್ಷರಾದ ಪ್ರಕಾಶ ಬೆಳಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 98456 09362

Share This Article
Leave a Comment

Leave a Reply

Your email address will not be published. Required fields are marked *