ಚಿತ್ರದುರ್ಗ,(ಡಿ.23): ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಹಿರಿಯೂರು ನಗರಸಭೆಗೆ 4 ಜನ ಅಭ್ಯರ್ಥಿಗಳನ್ನು ಇಂಜಿನಿಯರಿಂಗ್ ಶಾಖೆ, ಆರೋಗ್ಯ ಶಾಖೆ, ಲೆಕ್ಕಪತ್ರ ಶಾಖೆಗಳಲ್ಲಿ ತರಬೇತುದಾರರಾಗಿ ತಾತ್ಕಾಲಿಕವಾಗಿ ಕೆಲಸ ಕಲಿಯಲು ಆಸ್ತಿ ಇರುವಂತಹ ಡಿಪ್ಲೋಮಾ, ಬಿ.ಇ, ಇತರೇ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳವರು ಡಿಸೆಂಬರ್ 31ರೊಳಗಾಗಿ ಆನ್‍ಲೈನ್ ಮೂಲಕ https://intership.aicte-india.org/module ulb/Dashboard/TulipMain/ ರಲ್ಲಿ ಅರ್ಜಿ ಸಲ್ಲಿಸಿ ಕಚೇರಿಯ ಸಿಬ್ಬಂದಿ ಶಾಖೆಯ ವಿಷಯ ನಿರ್ವಾಹಕರಿಗೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಿದೆ.
ಅಭ್ಯರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆಯಾಗಿ ಟ್ರೈನಿಗಳಾಗಿ ಕರ್ತವ್ಯ ನಿರ್ವಹಿಸಿದವರಿಗೆ ಕಚೇರಿಯಿಂದ ಪ್ರಮಾಣ ಪತ್ರ ವಿತರಿಸಲಾಗುವುದು.
ಸಿವಿಲ್ ಇಂಜಿನಿಯರ್ 1 ಹುದ್ದೆಗೆ ಬಿ.ಇ, ಡಿಪ್ಲೋಮಾ ಇನ್ ಸಿವಿಲ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅಕೌಂಟೆಂಟ್ 1 ಹುದ್ದೆಗೆ ಬಿ.ಕಾಂ, ಎಂ.ಕಾಂ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಹೆಲ್ತ್ ಇನ್ಸ್‍ಪೆಕ್ಟರ್ 2 ಹುದ್ದೆಗಳಿಗೆ ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಈ ಎಲ್ಲ ಹುದ್ದೆಗಳಿಗೆ ಮಾಹೆಯಾನ ಒಬ್ಬರಿಗೆ 7000/- ಗೌರವಧನ ನೀಡಲಾಗುವುದು ಎಂದು ಹಿರಿಯೂರು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.