Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿರಿಯೂರು ನಗರಸಭೆ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಸೆಂಬರ್ 31 ಕೊನೆ ದಿನ

Facebook
Twitter
Telegram
WhatsApp

 

ಚಿತ್ರದುರ್ಗ,(ಡಿ.23):  ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಹಿರಿಯೂರು ನಗರಸಭೆಗೆ 4 ಜನ ಅಭ್ಯರ್ಥಿಗಳನ್ನು ಇಂಜಿನಿಯರಿಂಗ್ ಶಾಖೆ, ಆರೋಗ್ಯ ಶಾಖೆ, ಲೆಕ್ಕಪತ್ರ ಶಾಖೆಗಳಲ್ಲಿ ತರಬೇತುದಾರರಾಗಿ ತಾತ್ಕಾಲಿಕವಾಗಿ ಕೆಲಸ ಕಲಿಯಲು ಆಸ್ತಿ ಇರುವಂತಹ ಡಿಪ್ಲೋಮಾ, ಬಿ.ಇ, ಇತರೇ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳವರು ಡಿಸೆಂಬರ್ 31ರೊಳಗಾಗಿ ಆನ್‍ಲೈನ್ ಮೂಲಕ https://intership.aicte-india.org/module ulb/Dashboard/TulipMain/ ರಲ್ಲಿ ಅರ್ಜಿ ಸಲ್ಲಿಸಿ ಕಚೇರಿಯ ಸಿಬ್ಬಂದಿ ಶಾಖೆಯ ವಿಷಯ ನಿರ್ವಾಹಕರಿಗೆ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಿದೆ.

ಅಭ್ಯರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆಯಾಗಿ ಟ್ರೈನಿಗಳಾಗಿ ಕರ್ತವ್ಯ ನಿರ್ವಹಿಸಿದವರಿಗೆ ಕಚೇರಿಯಿಂದ ಪ್ರಮಾಣ ಪತ್ರ ವಿತರಿಸಲಾಗುವುದು.

ಸಿವಿಲ್ ಇಂಜಿನಿಯರ್ 1 ಹುದ್ದೆಗೆ ಬಿ.ಇ, ಡಿಪ್ಲೋಮಾ ಇನ್ ಸಿವಿಲ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಅಕೌಂಟೆಂಟ್ 1 ಹುದ್ದೆಗೆ ಬಿ.ಕಾಂ, ಎಂ.ಕಾಂ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಹೆಲ್ತ್ ಇನ್ಸ್‍ಪೆಕ್ಟರ್ 2 ಹುದ್ದೆಗಳಿಗೆ ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಈ ಎಲ್ಲ ಹುದ್ದೆಗಳಿಗೆ ಮಾಹೆಯಾನ ಒಬ್ಬರಿಗೆ 7000/-  ಗೌರವಧನ ನೀಡಲಾಗುವುದು ಎಂದು ಹಿರಿಯೂರು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಳನೀರು ? ನಿಂಬೆ ರಸ ? ಸುಡುವ ಬಿಸಿಲಿನಲ್ಲಿ ಯಾವ ಪಾನೀಯ ಉತ್ತಮ….!

ಸುದ್ದಿಒನ್ : ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಅನೇಕರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಕಾಲಕಾಲಕ್ಕೆ ಹೈಡ್ರೇಟಿಂಗ್(ನಿರ್ಜಲೀಕರಣ) ಪಾನೀಯವನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಹೈಡ್ರೇಟಿಂಗ್ ಪಾನೀಯಗಳ ವಿಷಯಕ್ಕೆ ಬಂದರೆ, ಜನರ ಮನಸ್ಸಿಗೆ ಮೊದಲು

Aadhaar Card Updates : ಆಧಾರ್ ಕಾರ್ಡ್ ನಲ್ಲಿ ಈ ವಿವರಗಳನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ..

ಸುದ್ದಿಒನ್ : ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಸಂಪರ್ಕವನ್ನು ಪಡೆಯಲು ಅಥವಾ ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಪ್ರಸ್ತುತ ಭಾರತೀಯ ಪೌರತ್ವಕ್ಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

error: Content is protected !!