‘ಪಂಚರತ್ನ’ ಅಲೆಗೆ ಹೆದರಿ ಕೊರೊನಾ ಬಿಡುತ್ತಾ ಇದ್ದಾರೆ : ಕುಮಾರಸ್ವಾಮಿ

ಮಂಡ್ಯ : ಒಂದು ಕಡೆ ಚುನಾವಣೆ ಹತ್ತಿರವಾಗುತ್ತಿದೆ. ಮೂರು ಪಕ್ಷಗಳು ಜನರ ಬಳಿಗೆ ಹೋಗಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡಿದ್ದಾರೆ. ಆದರೆ ಇದರ ನಡುವೆ ಕೊರೊನಾ ಹೆಚ್ಚಾಗುವ ಭೀತಿ ಕಾಡುತ್ತಿದೆ. ಹೀಗಾಗಿ ಕೇಂದ್ರದಲ್ಲೂ ಸಭೆಗಳು ನಡೆಯುತ್ತಿವೆ, ರಾಜ್ಯದಲ್ಲೂ ಸಭೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಪಂಚರತ್ನ ರಥಯಾತ್ರೆಯಲ್ಲಿ ಜನರ ಅಲೆಯನ್ನು ನೋಡಿ ಕೊರೊನಾ ಭೂತವನ್ನು ಬಿಡುತ್ತಿದ್ದಾರೆ. ಕೊರೊನಾಗೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಕೊರೊನಾ ವಿಚಾರವಾವಿ ನಾನು ಲಘುವಾಗಿ ಮಾತನಾಡೋದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು. ಈಗ ಚೀನಾದಲ್ಲಿ ಹರಡುತ್ತಿರುವ ಕೊರೊನಾವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ನನ್ನ ಅಹಕಾರವೂ ಇದೆ. ಆದರೆ ನನಗೊಂದು ಮಾಹಿತಿಯೂ ಇದೆ ಎಂದು ಬಾಂಬ್ ಸಿಡಿಸಿದ್ದಾರೆ.

ಈ ಕೊರೊನಾ ಭೂತವನ್ನು ಬಿಡುತ್ತಿರುವುದು ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನು ನೋಡಿ. ಈ ಬಗ್ಗೆ ಕೇಶವ ಕೃಪದಲ್ಲಿ ಚರ್ಚೆಯಾಗ್ತಿದೆ. ಪ್ರಧಾನಮಂತ್ರಿಗಳ ಗಮನಕ್ಕೆ ತಂದು ಪನಮಚರತ್ನ ಯಾತ್ರೆಗೆ ನಿರ್ಬಂಧ ಹೇರುವ ಹುನ್ನಾರ ನಡೆಯುತ್ತಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!