ಕೆಮ್ಮು, ಎದೆನೋವಿನ ಜೊತೆಗೆ ಕಿವಿ ಕೇಳಿಸದೆ ಹೋದರೆ ಅದು ಹೊಸ ವೈರಸ್ ಲಕ್ಷಣವೇ..!

suddionenews
1 Min Read

ಎರಡು ವರ್ಷದಿಂದ ಅನುಭವಿಸಿದ್ದ ಕೊರೊನಾ ಸಂಕಟ ಈಗ ದೂರವಾಗಿದೆ ಎಂದುಕೊಳ್ಳುವಾಗಲೇ ಮತ್ತೊಂದು ಭಯಾನಕವಾದ ರೂಪಾಂತರಿ ವೈರಸ್ ಮತ್ತೆ ಅಟ್ಯಾಕ್ ಮಾಡುವಲ್ಲಿ ನಿರತವಾಗಿದೆ. ಅದುವೇ ಬಿಎಫ್.7 ಎಂಬ ವೈರಸ್ ಎಲ್ಲರ ನಿದ್ದೆ ಕೆಡಿಸಿದೆ. ಸದ್ಯ ಈ ವೈರಸ್ ನಿಂದಾಗಿ ಚೀನಾದಲ್ಲಿ ಸಾಲು ಸಾಲು ಶವಗಳು ಬಿದ್ದಿವೆ. ಆಸ್ಪತ್ರೆಗಳು ಭರ್ತಿಯಾಗಿವೆ. ನಮ್ಮ ದೇಶಕ್ಕೆ ಮಾರಣಾಂತಿಕ ವೈರಸ್ ಬಾರದಂತೆ ಎಚ್ಚರಿಕೆ ವಹಿಸಬೇಕು ಎನ್ನುವಷ್ಟರಲ್ಲಿಯೇ ಮೂರು ಪ್ರಕರಣಗಳು ಕಂಡು ಬಂದಿದೆ.

ಚೀನಾದಲ್ಲಿ ಹೆಚ್ಚುತ್ತಿರುವ ಈ ರೂಪಾಂತರಿ ವೈರಸ್ ನಿಂದ ದೇಶವನ್ನು ಕಾಪಾಡುವುದಕ್ಕೆ ಕೇಂದ್ರದಲ್ಲಿ ಸಭೆ ನಡೆಯುತ್ತಿವೆ. ವೈರಸ್ ಸೋಂಕು ತಲುಪದಂತೆ ಏನೆಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಚರ್ಚೆ ನಡೆಸಿದ್ದಾರೆ. ಈಗಾಗಲೇ ದೇಶದಲ್ಲಿ 24 ಗಂಟೆಗಳಲ್ಲಿ 129 ಹೊಸ ಕೇಸುಗಳು ಬೇರೆ ಪತ್ತೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಇನ್ನು ಈ ರೂಪಾಂತರಿ ವೈರಸ್ ನ ಲಕ್ಷಣಗಳನ್ನು ಜನರು ಕೂಡ ನಿರ್ಲಕ್ಷ್ಯ ಮಾಡುವುದು ಬೇಡ. ಇದರ ಲಕ್ಷಣಗಳು ಇಂತಿದೆ. ನಿರಂತರವಾಗಿ ಕೆಮ್ಮು, ಎದೆ ನೋವು, ವಾಸನೆ ಗ್ರಹಿಕೆಯಲ್ಲಿ ಸಮಸ್ಯೆ ಹಾಗೂ ಶ್ರವಣ ಶಕ್ತಿಯಲ್ಲಿಯೂ ಸಮಸ್ಯೆ ಕಂಡು ಬರುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ವಾತಾವರಣವೂ ಎಲ್ಲರಿಗೂ ಶೀತ, ಕೆಮ್ಮು ಬರುವಂತೆಯೇ ಇದೆ. ಈಗಾಗಲೇ ಸಾಕಷ್ಟು ಜನ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಅದು ವಾತಾವರಣದ ಏರುಪೇರಿನಿಂದಾದ ಸಮಸ್ಯೆಯಾಗಿದೆ. ಅದಕ್ಕೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಆದರೆ ಅದಕ್ಕೂ ಮೀರಿದ ಪರಿಣಾಮಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Share This Article
Leave a Comment

Leave a Reply

Your email address will not be published. Required fields are marked *