ಚಿತ್ರದುರ್ಗ, (ಡಿ.17) : ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಾಳೆ (ಡಿ.18) ಆಯೋಜಿಸಿರುವ “ಓನಕೆ ಓಬವ್ವ ಜಯಂತಿ” ಕಾರ್ಯಕ್ರಮ ಮತ್ತು ಮೆರವಣಿಗೆ ಸಂಬಂಧ ತಾತ್ಕಾಲಿಕವಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಹಾಗೂ ಭಾರಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಆರ್.ಜೆ. ಆದೇಶಿದ್ದಾರೆ.
ನಾಳೆ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಿರುವ “ಓನಕೆ ಓಬವ್ವ ಜಯಂತಿ” ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಬೆಂಗಳೂರು ಮತ್ತು ಸರ್ಕಾರದ ಪ್ರಮುಖ ಸಚಿವರುಗಳು, ಶಾಸಕರುಗಳು, ಇತರ ರಾಜಕಾರಣಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು, ಕಾರ್ಯಕ್ರಮದ ಅಂಗವಾಗಿ ನಗರದ ಕನಕ ಸರ್ಕಲ್‌ನಿಂದ ಚಳ್ಳಕೆರೆ ಸರ್ಕಲ್‌ವರೆಗೆ ಮೆರವಣಿಗೆ ಸಾಗಲಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದಾರೆ ಈ ಸಂಬಂಧ ನಗರದಲ್ಲಿ ಸಂಚಾರ ದಟ್ಟಣೆ ಜಾಸ್ತಿ ಇರುವುದರಿಂದ ದಿನಾಂಕ:18-12-2022 ರಂದು ಬೆಳಿಗ್ಗೆ 08-00 ಗಂಟೆಯಿಂದ ಸಂಜೆ 06-00 ಗಂಟೆವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಹಾಗೂ ಭಾರಿ ವಾಹನಗಳು ಸಂಚರಿಸುವ ಮಾರ್ಗ ಬದಲಾವಣೆ ಮಾಡಿ ಆದೇಶಿದ್ದಾರೆ.
1. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರ ಹೋಗುವ ಎಲ್ಲಾ ಬಸ್‌ಗಳು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಹೊರ ಹೋಗುವುದು ಹಾಗೂ ಒಳ ಬರುವುದು.
2. ಚಳ್ಳಕೆರೆ ಮತ್ತು ಹಿರಿಯೂರು ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಬರುವ ಕೆ.ಸ್.ಆರ್.ಟಿ.ಸಿ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್‌ಗೆ ಒಳ ಹೋಗುವುದು ಮತ್ತು ಹೊರ ಬರುವುದು.
3. ಚಳ್ಳಕೆರೆ ಮತ್ತು ಹಿರಿಯೂರು ಕಡೆಯಿಂದ ಬರುವ ಖಾಸಗಿ ಬಸ್ ನಿಲ್ದಾಣದ ಕಡೆಗೆ ಬರುವ ಖಾಸಗಿ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಬಂದು ಅಜಾದ್ ಮಿಲ್ ಕ್ರಾಸ್‌ನಲ್ಲಿ ಎ.ಪಿ.ಎಂ.ಸಿ ಒಳಗಿನಿಂದ ಖಾಸಗಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಬರುವುದು.
4. ಹೊಳಲ್ಕೆರೆ, ಶಿವಮೊಗ್ಗ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಎನ್.ಹೆಚ್-13 ರಸ್ತೆಯಲ್ಲಿ ಮುರುಘಾಮಠದ ಮುಂಭಾಗದಿಂದ ಜೆ.ಎಂ.ಐ.ಟಿ, ಸರ್ಕಲ್ ಮುಖಾಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.
5. ಹೊಳಲ್ಕೆರೆ ಶಿವಮೊಗ್ಗ ಕಡೆಯಿಂದ ಬರುವ ಖಾಸಗಿ ಬಸ್ ನಿಲ್ದಾಣದ ಕಡೆಗೆ ಬರುವ ಖಾಸಗಿ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಎನ್.ಹೆಚ್-13 ರಸ್ತೆಯಲ್ಲಿ ಮುರುಘಾಮಠದ ಮುಂಭಾಗದಿಂದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಬಂದು ಅಜಾದ್ ಮಿಲ್ ಕ್ರಾಸ್ ನಲ್ಲಿ ಎ.ಪಿ.ಎಂ.ಸಿ ಒಳಗಿನಿಂದ ಖಾಸಗಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.
6. ಹೊಸಪೇಟೆ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವ ಕೆ.ಎಸ್.ಆರ್.ಟಿ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.
7, ಹೊಸಪೇಟೆ ಕಡೆಯಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ಸುಗಳನ್ನು ನಗರದ ಒಳಗೆ ಬರದಂತೆ ನಗರದ ಜೆ.ಎಂ.ಐ.ಟಿ ಸರ್ಕಲ್ ಮುಖಾಂತರ ಬಂದು ಅಜಾದ್ ಮಿಲ್ ಕ್ರಾಸ್ ನಲ್ಲಿ ಎ.ಪಿ.ಎಂ.ಸಿ ಒಳಗಿನಿಂದ ಖಾಸಗಿ ಬಸ್ ನಿಲ್ದಾಣದ ಒಳ ಹೋಗುವುದು ಮತ್ತು ಹೊರ ಹೋಗುವುದು.
8. ಭಾರಿ ವಾಹನಗಳು ನಗರದ ಒಳಗೆ ಪ್ರವೇಶ ಮಾಡದಂತೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.