ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ವಿವಾದವನ್ನುಂಟು ಮಾಡಿತ್ತು. ಇದೀಗ ಆ ವಿಚಾರವಾಗಿ ಮತ್ತೆ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ಯಾರಿಗೂ ಕ್ಚಮೆ ಕೇಳುವುದಿಲ್ಲ ಎಂದಿದ್ದಾರೆ.
ನಾನು ಬ್ಲಾಸ್ಟ್ ಪ್ರಕರಣವನ್ನು ಸಮರ್ಥಿಸಿಕೊಳ್ಳುವುದಿಲ್ಲ. ಈ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಯಾವ ಟೆರರಿಸ್ಟ್ ಗೂ ಬೆಂಬಲವಿಲ್ಲ. ಆದರೆ ಅದನ್ನು ವೈಭವೀಕರಿಸಿದ ರೀತಿ ಸರಿಯಿಲ್ಲ. ಬಿಜೆಪಿಯವರು ಮಾಧ್ಯಮದವರ ದಿಕ್ಕು ತಪ್ಪಿಸಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬಳಸಿಕೊಂಡರು ಎಂದಿದ್ದಾರೆ.
ಟೆರರಿಸ್ಟ್ ಅಟ್ಯಾಕ್ ಅನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಭಯೋತ್ಪಾದಕರ ದಾಳಿಯಿಂದ ನಮ್ಮ ನಾಯಕರನ್ನೇ ನಾವೂ ಕಳೆದುಕೊಂಡಿದ್ದೇವೆ. ಅದರ ನೋವು ಏನು ಎಂಬುದು ಗೊತ್ತಿದೆ. ಆದರೆ ಯಾವುದೇ ತನಿಖೆ ಮಾಡದೆಯೇ ಉಗ್ರ ಚಟುವಟಿಕೆ ಎಂದು ಹೇಳಿದ್ದೀರಿ. ತನಿಖೆಗೂ ಮೊದಲೇ ಟೆರರ್ ಅಟ್ಯಾಕ್ ಅಂತ ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸಿದ್ದಾರೆ.
ಇಂದು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಮಾತನಾಡಿದ್ದ ಡಿಕೆ ಶಿವಕುಮಾರ್, ಮತದಾರರ ಮಾಹಿತಿ ಪ್ರಕರಣ, ಭ್ರಷ್ಟಾಚಾರದ ಪ್ರಕರಣ ಮುಚ್ಚಿ ಹಾಕಲು ಬಿಜೆಪಿಯವರು ಡೈವರ್ಟ್ ಮಾಡುತ್ತಿದ್ದಾರೆ ಎಂದಿದ್ದರು. ಈ ಹೇಳಿಕೆಗೆ ಬಿಜೆಪಿಯವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.