ಹುಬ್ಬಳ್ಳಿ: ಬಳ್ಳಾರಿಗೆ ಅನುಮತಿ ಇಲ್ಲದ ಕಾರಣ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಗಂಗಾವತಿಯಿಂದ ತಮ್ಮ ರಾಜಕೀಯ ಭವಿಷ್ಯವನ್ನು ಶುರು ಮಾಡಲು ಆರಂಭಿಸಿದ್ದಾರೆ. ಗಂಗಾವತಿಯಿಂದ ಈ ಬಾರಿ ಸ್ಪರ್ಧೆ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸಿ, ಆ ಪಕ್ಷದಿಂದ ನಿಲ್ಲುತ್ತಾರೆ ಎಂಬ ಮಾತಿದೆ.
ಈ ಮಧ್ಯೆ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ನಿಂತರೆ, ಅಲ್ಲಿನ ಶಾಸಕರಿಗೆ ಟಿಕೆಟ್ ಮಿಸ್ ಆಗುವ ಭಯ ಶುರುವಾಗಿದೆ. ಪರಮಣ್ಣ ಮುನ್ನವಳ್ಳಿ ಅವರಿಗೆ ಟಿಕೆಟ್ ಬಗ್ಗೆ ಭಯ ಶುರುವಾಗಿದೆ. ಹೀಗಾಗಿ ದಿಢೀರನೆ ಪ್ರಹ್ಲಾದ್ ಜೋಶಿ ಅವರ ಮನೆಗೆ ದೌಡಾಯಿಸಿದ್ದಾರೆ. ಟಿಕೆಟ್ ವಿಚಾರವಾಗಿ ಸಚಿವರ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಆದ್ರೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡುವುದು ಸಹಜ. ಇದಕ್ಕೆ ಬೇರೆಯಾದ ಅರ್ಥ ಕಲ್ಪಿಸಬೇಡಿ. ಜನಾರ್ದನ ರೆಡ್ಡಿಯವರು ಗಂಗಾವತಿಯಿಂದ ಸ್ಪರ್ಧಿಸಿದರೆ ನನಗೇನು ಯಾವ ಭಯವೂ ಇಲ್ಲ ಎಂದಿದ್ದಾರೆ.