ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾಗಾಂಧಿ ಹುಟ್ಟುಹಬ್ಬ ಆಚರಣೆ   

1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಡಿ.09): ಸೋನಿಯಾಗಾಂಧಿರವರ ಹುಟ್ಟುಹಬ್ಬ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಎ.ಐ.ಸಿ.ಸಿ.ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿ ಅಧಿಕಾರ ತ್ಯಾಗ ಮಾಡಿ ಮಾದರಿ ಮಹಿಳೆ ಎನಿಸಿಕೊಂಡಿದ್ದಾರೆ. ಪ್ರಧಾನಿ ಹುದ್ದೆ ಹುಡುಕಿಕೊಂಡು ಬಂದಾಗ ನಯವಾಗಿ ತ್ಯಜಿಸಿ ಮನಮೋಹನ್‍ಸಿಂಗ್‍ರವರನ್ನು ದೇಶದ ಪ್ರಧಾನಿಯನ್ನಾಗಿಸಿದರು.
ಅಧಿಕಾರಕ್ಕಾಗಿ ಎಂದಿಗೂ ಆಸೆಪಟ್ಟವರಲ್ಲ. ತ್ಯಾಗದ ಸಂಕೇತವಾಗಿರುವ ಸೋನಿಯಾರವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗೋಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್ ಹೇಳಿದರು.

ಹಿಮಾಚಲಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಲವತ್ತು ಸ್ಥಾನಗಳನ್ನು ಗೆದ್ದಿದೆ. ಜನತೆ ಬದಲಾವಣೆ ಬಯಸಿ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಯಾವುದೇ ಆಸೆಗೆ ಬಲಿಯಾಗದೆ ಕಾಂಗ್ರೆಸ್ ಕೊಡುಗೆಯನ್ನು ಅರ್ಥಮಾಡಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆಂದು ಹೇಳಿದರು.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್ ಮಾತನಾಡಿ ಅನೇಕ ವರ್ಷಗಳ ಕಾಲ ಎ.ಐ.ಸಿ.ಸಿ.ಅಧ್ಯಕ್ಷೆಯಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋದ ಸೋನಿಯಾಗಾಂಧಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟರು ಮಹಾನ್ ತ್ಯಾಗಿ. ಈಗ ಎ.ಐ.ಸಿ.ಸಿ.ಅಧ್ಯಕ್ಷ ಗಾದಿಯನ್ನು ಮಲ್ಲಿಕಾರ್ಜುನ ಖರ್ಗೆರವರಿಗೆ ವಹಿಸಿದ್ದಾರೆ. ಅಂತಹ ನಿಸ್ವಾರ್ಥ ಮಹಿಳೆಯ ಆದರ್ಶ, ತತ್ವ, ಚಿಂತನೆಗಳನ್ನಿಟ್ಟುಕೊಂಡು ಪಕ್ಷವನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಮುದಸಿರ್ ನವಾಜ್, ರವಿಕುಮಾರ್, ಎ.ಸಾಧಿಕ್‍ವುಲ್ಲಾ, ಮಹಬೂಬ್‍ಸಾಬ್ ಜಿ.ಆರ್.ಹಳ್ಳಿ, ಮೋಕ್ಷರುದ್ರಸ್ವಾಮಿ, ದಲಿತ ಮುಖಂಡ ಬಿ.ರಾಜಪ್ಪ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *