ಸುಶಾಂತ್ ಸಿಂಗ್ ನಿಧನರಾದ ಮೇಲೆ ಅಭಿಮಾನಿಗಳು ಈಗಲು ಅವರ ನೆನಪುಗಳನ್ನು ಜೀವಿಸುತ್ತಾ ಇದ್ದಾರೆ. ಅವರ ಹುಟ್ಟುಹಬ್ಬ ಆಚರಿಸುತ್ತಾ, ಅವರ ಪುಣ್ಯಸ್ಮರಣೆಯನ್ನು ನೆನಪಿಸಿಕೊಳ್ಳುತ್ತಾ, ಇಂಥೊಬ್ಬ ನಟನನ್ನು ನಾವೆಲ್ಲಾ ಕಲೆದುಕೊಂಡು ಬಿಟ್ಟೆವಲ್ಲಾ ಎಂಬ ನೋವಿನಲ್ಲಿಯೇ ಇದ್ದಾರೆ. ಇದೀಗ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಎಲ್ಲವನ್ನು ಮರೆತು ಬೇರೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ರಿಯಾ ಕಾರಣ ಎಂಬ ಆರೋಪವಿದ್ದ ಕಾರಣ ಅವರನ್ನು ಪೊಲೀಸರು ಬಂಧನ ಕೂಡ ಮಾಡಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. ಸುಶಾಂತ್ ಇಲ್ಲದ ಜೀವನವನ್ನು ನೆನೆಸಿಕೊಳ್ಳುವುದಕ್ಕೂ ಕಷ್ಟ. ಅವರ ಸಾವಿನ ನಂತರದ ದಿನಗಳು ತುಂಬಾನೇ ಕಷ್ಟವಾಗಿದ್ದವು ಎಂದು ನಟಿ ಟ್ವೀಟ್ ಕೂಡ ಮಾಡಿದ್ದರು. ಇದೀಗ ಸುಶಾಂತ್ ಜಾಗಕ್ಕೆ ಬಂಟಿ ಬಂದಿದ್ದಾರೆ ಎನ್ನಲಾಗುತ್ತಿದೆ.
ಬಂಟಿ ಸಜ್ಹೋದ್ ಅವರೊಂದಿಗೆ ರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದಾರೆ. ಎದನ್ನು ಗುಟ್ಟಾಗಿ ಇಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಬಂಟಿ ಅವರು ಫೇಮಸ್ ಫ್ಯಾಷನ್ ಡಿಸೈನರ್ ಸೀಮಾ ಸಜ್ಹೇದ್ ಅವರ ಕಿರಿಯ ಸಹೋದರ. ಬಂಟಿ ಅವರು ಸದ್ಯ ಕಾರ್ನರ್ ಸ್ಪೋರ್ಟ್ಸ್ ನ ಎಂಡಿ ಹಾಗೂ ಸಿಇಒ ಆಗಿದ್ದಾರೆ. ರಿಯಾಲಿಟಿ ಸ್ಟಾರ್ ಕೂಡ.
ಆದರೆ ರಿಯಾಗೆ ಬಂಟಿ ಹಲವು ವರ್ಷಗಳಿಂದಾನು ಗೊತ್ತಂತೆ. ರಿಯಾ ಏನೇ ಸಮಸ್ಯೆಯಲ್ಲಿ ಸಿಲುಕಿದಾಗಲೂ ಬಂಟಿ ಅಲ್ಲಿ ಸಹಾಯಕ್ಕೆ ಬಂದು ನಿಲ್ಲುತ್ತಿದ್ದರಂತೆ. ಸುಶಾಂತ್ ವಿಚಾರದಲ್ಲೂ ಬಂಟಿಯನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಇಬ್ಬರು ಡೇಟಿಂಗ್ ನಲ್ಲಿದ್ದಾರೆ ಎಂದು ಗುಸಗುಸು ಹರಿದಾಡುತ್ತಿದೆ. ಜೊತೆಗೆ ಈ ಹಿಂದೆ ಬಂಟಿ ಹೆಸರು ಸೋನಾಕ್ಷಿ ಸಿನ್ಹಾ ಜೊತೆಗೂ ತಳುಕು ಹಾಕಿಕೊಂಡಿತ್ತು.