ಬೆಂಗಳೂರು: ಹಲವು ವರ್ಷಗಳಿಂದ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಕೇಸ್ ಗಳು ನಡೆಯುತ್ತಲೆ ಇದೆ. ಈ ಕೇಸ್ ಗಳಿಂದಾನೇ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ನೆಲೆನಿಲ್ಲುವುದಕ್ಕೆ ಆಗದೆ, ಕೊಪ್ಪಳದಲ್ಲಿ ಮನೆ ಮಾಡಿದ್ದಾರೆ. ಆದ್ರೆ ಇದೀಗ ಅವರ ರಾಜಕೀಯ ಹಾದಿ ಸುಗಮವಾಗುವುದಕ್ಕೆ ದಾರಿ ಮಾಡಿಕೊಟ್ಟಂತೆ ಆಗಿದೆ.
ಐಟಿ ಅಧಿಕಾರಿಗಳು ದಾಖಲಿಸಿದ್ದ ನಾಲ್ಕು ಕೇಸ್ ಗಳು ಖುಲಾಸೆಗೊಂಡಿವೆ. ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧದ ನಾಲ್ಕು ಪ್ರಕರಣಗಳು ಖುಲಾಸೆಯಾಗಿವೆ. 2009ರಲ್ಲಿ ಬೇನಾಮಿ ಆಸ್ತಿ ಮಾಡಿದ ಆರೋಪದ ಮೇಲೆ ಐಟಿ ಅಧಿಕಾರಿಗಳು ಕೇಸ್ ದಾಖಲಿಸಿದ್ದರು. ಆ ಕೇಸ್ ಈಗ ಕ್ಲೋಸ್ ಆಗಿದೆ.
ರೆಡ್ಡಿ ವಿರುದ್ಧ ದಾಖಲಾಗಿದ್ದ ನಾಲ್ಕು ಕೇಸ್ ಗಳನ್ನು ಕೋರ್ಟ್ ಖುಲಾಸೆ ಮಾಡಿದೆ. ಓಬಳಾಪುರಂ ಮೈನಿಂಗ್ ಸೇರಿದಂತೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರನ್ನು ಬಂಧಿಸಿತ್ತು. ಬಂಧನದ ನಾಲ್ಕು ತಿಂಗಳ ಬಳಿಕ ರೆಡ್ಡಿಗೆ ಜಾಮೀನು ಸಿಕ್ಕಿತ್ತು. ಆದ್ರೆ ಬಳ್ಳಾರಿಗೆ ಹೋಗುವುದಕ್ಕೆ ಅನುಮತಿ ನೀಡಿರಲಿಲ್ಲ. ಈಗಲೂ ರೆಡ್ಡಿಗೆ ಬಳ್ಳಾರಿಗೆ ಹೋಗುವುದಕ್ಕೆ ಅವಕಾಶವಿಲ್ಕ. ಮೊಮ್ಮಗಳು ಹುಟ್ಟಿದ ಕಾರಣಕ್ಕೆ ಒಂದು ತಿಂಗಳ ಅನುಮತಿ ಪಡೆದಿದ್ದರು. ಇದೀಗ ಈ ಕೇಸ್ ಗಳೆಲ್ಲಾ ಕ್ಲೋಸ್ ಆಗಿರುವ ಕಾರಣ, ಇನ್ನು ರಾಜಕೀಯದ ದಾರಿ ಸುಗಮವಾಗಿದೆ.