ಹುಬ್ಬಳ್ಳಿ: 2023ರ ಚುನಾವಣೆಗೆ ಜೆಡಿಎಸ್ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಾರಿ ತಯಾರಿ ನಡೆಸುತ್ತಿವೆ. ಜೆಡಿಎಸ್ ಪಂಚರತ್ನ ಯಾತ್ರೆ ಮೂಲಕ ಜನರ ಬಳಿಗೆ ತಲುಪುತ್ತಿದ್ದಾರೆ. ಪಂಚರತ್ನಯಾತ್ರೆ ಮೂಲಕ ಜನರಿಗೆ ಭರವಸೆ ನೀಡುತ್ತಿದ್ದಾರೆ. ಸಿ ಎಂ ಇಬ್ರಾಹಿಂ ತಮ್ಮ ಸಮುದಾಯದವರ ಪರ ಯಾತ್ರೆಯಲ್ಲಿ ಬ್ಯಾಟ್ ಬೀಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಾತ್ರೆಗಳು, ದೇವಾಲಯದ ವಿಶೇಷ ದಿನಗಳಂದು ಅನ್ಯ ಧರ್ಮದವರ ವ್ಯಾಪಾರವನ್ನು ನಿಷೇಧ ಮಾಡುವ ಅಭಿಯಾನ ಆರಂಭವಾಗಿತ್ತು. ಈ ಸಂಬಂಧ ಮಾತನಾಡಿರುವ ಇಬ್ರಾಹಿಂ, ಮುಸ್ಲಿಂ ವ್ಯಾಪಾರಿಗಳು ಕೇವಲ ಇನ್ನು 5 ತಿಂಗಳು ಮಾತ್ರ ತಡೆದುಕೊಳ್ಳಿ. ನಂತರ ಈ ದರಿದ್ರಗಳು ಹೋಗುತ್ತವೆ. ನಮ್ಮದೇ ಸರ್ಕಾರ ಬರುತ್ತೆ ಎಂದಿದ್ದಾರೆ.
ಗೋವಾದಲ್ಲಿ ಯಾಕೆ ಗೋಹತ್ಯೆ ನಿಷೇಧವಿಲ್ಲ. ಕರ್ನಾಟಕದಲ್ಲಿ ಮಾತ್ರ ಯಾಕೆ ಗೋಹತ್ಯೆ ನಿಷೇಧವಿದೆ. ಕರ್ನಾಟಕದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಕಾರಣಕ್ಕೆ ಗೋಹತ್ಯೆ ನಿಷೇಧ ಮಾಡಿದ್ದೀರಿ. ಈ ಕಾನೂನು ತಂದ ಮೇಲೆ ರೈತರ ಆತ್ಮಹತ್ಯೆ ಜಾಸ್ತಿಯಾಗುತ್ತಿದೆ. ಚುನಾವಣೆ ಸಮಯದಲ್ಲಿ ಇದನ್ನು ಮತಕ್ಕಾಗಿ ಮಾತ್ರ ಮಾಡುತ್ತಿರುವುದು ಎಂದು ಆರೋಪ ಮಾಡಿದ್ದಾರೆ.