ಚಿತ್ರದುರ್ಗ : ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು, ಹೆಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಳ್ಳಕೆರೆ, ಐಕ್ಯೂಎಸಿ ಮತ್ತು ಕನ್ನಡ ವಿಭಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಹೆಚ್‍ಪಿಪಿಸಿ ಸ.ಪ್ರ.ದ.ಕಾಲೇಜಿನ ಆವರಣದಲ್ಲಿ ಡಿಸೆಂಬರ್ 06 ಮತ್ತು 07 ವರೆಗೆ ಎರಡು ದಿನಗಳ ಕಾಲ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಂಗಸಂಗೀತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ 06 ರಂದು ಬೆಳಿಗ್ಗೆ 11-30ಗಂಟೆಗೆ ರಂಗಸಂಗೀತ ಕಾರ್ಯಾಗಾರವನ್ನು ಚಳ್ಳಕೆರೆ ತಾಲ್ಲೂಕು ದಂಡಾಧಿಕಾರಿ ಎನ್.ರಘುಮೂರ್ತಿ ಉದ್ಘಾಟಿಸುವರು. ಪ್ರಾಚಾರ್ಯ ಬಿ.ಯು.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು. ಐಕ್ಯೂಎಸಿ ಸಂಚಾಲಕ ಪ್ರೊ.ಡಿ.ಎನ್. ರಘುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿತ್ರದುರ್ಗ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ, ಕಸಾಪ ತಾಲ್ಲೂಕಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಕನ್ನಡ ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಮುಂತಾದವರು ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.
ರಂಗಸಂಗೀತ ಕಾರ್ಯಾಗಾರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ.ಚಂದ್ರಶೇಖರ ಕಂಬಾರ, ಡಾ.ಗಿರೀಶ್ ಕಾರ್ನಾಡ್, ಸಾಹಿತಿ ಪು.ತಿ.ನರಸಿಂಹಾಚಾರ್ ಮುಂತಾದ ಹಿರಿಯ ಸಾಹಿತಿಗಳು ರಚಿಸಿರುವ, ರಂಗಜಂಗಮ ಹಿರಿಯ ರಂಗ ನಿರ್ದೇಶಕ ಬಿ.ವಿ.ಕಾರಂತರ ಸಂಗೀತ ಸಂಯೋಜನೆಯಲ್ಲಿ ರೂಪುಗೊಂಡಿರುವ ಸತ್ತವರ ನೆರಳು, ಗೋಕುಲ ನಿರ್ಗಮನ, ಜೋಕುಮಾರಸ್ವಾಮಿ, ಪಂಜರಶಾಲೆ ಮುಂತಾದ ನಾಟಕಗಳಲ್ಲಿ ಬರುವ ರಂಗಗೀತೆಗಳ ಗಾಯನ ತರಬೇತಿಯನ್ನು ನೀನಾಸಂ ಪದವೀಧರ ಕೆ.ಪಿ.ಎಂ.ಗಣೇಶಯ್ಯ ಇವರು ಹೆಚ್‍ಪಿಪಿಸಿ ಸ.ಪ್ರ.ದ.ಕಾಲೇಜಿನ ಆಯ್ದ ವಿದ್ಯಾರ್ಥಿ/ನಿಯರಿಗೆ ತರಬೇತಿ ನೀಡಲಿದ್ದಾರೆ ಎಂದು ರಂಗಸೌರಭ ಕಲಾ ಸಂಘದ ನಿರ್ದೇಶಕ ಎಂ.ವಿ.ನಟರಾಜ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.