ಬೆಂಗಳೂರು: ನಟಿ ಹರಿಪ್ರಿಯಾ ಮೂಗು ಚುಚ್ಚಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೆ ಲವ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸ್ಯಾಂಡಲ್ ವುಡ್ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಲವ್ ಮಾಡುತ್ತಿದ್ದಾರೆ, ಮದುವೆ ಕೂಡ ಆಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಈ ಜೋಡಿ ಇತ್ತಿಚೆಗೆ ಒಟ್ಟಿಗೆ ಏರ್ಪೋರ್ಟ್ ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇದೀಗ ಗುಟ್ಟಾಗಿ ನಿಶ್ಚಿತಾರ್ಥ ಆಗಿದೆ ಎನ್ನಲಾಗುತ್ತಿದೆ.
ಹರಿಪ್ರಿಯಾ ಅವರ ನಿವಾಸದಲ್ಲಿಯೇ ಇಬ್ಬರ ನಿಶ್ಚಿತಾರ್ಥ ನಡೆದಿದೆ ಎನ್ನಲಾಗುತ್ತಿದೆ. ಮನೆಯವರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ನೆರವೇರಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿಯೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಬ್ಬರ ಕಡೆಯಿಂದಾನೂ ನಿಶ್ಚಿತಾರ್ಥದ ವಿಚಾರವಾಗಲಿ, ಮದುವೆ ವಿಚಾರವಾಗಲಿ ಸದ್ಯಕ್ಕೆ ಎಲ್ಲಿಯೂ ಮಾಹಿತಿ ಬಂದಿಲ್ಲ.
ಸದ್ಯ ಹರಿಪ್ರಿಯಾ ಅಂಡ್ ವಸಿಷ್ಠ ಇಬ್ಬರು ಒಟ್ಟಿಗೆ ನಟಿಸಿರುವ ಎವರು ತೆಲುಗು ಸಿನಿಮಾ ರಿಲೀಸ್ ಆಗಬೇಕಿದೆ. ಈ ಸಿನಿಮಾದ ಮೂಲಕವೇ ಇಬ್ಬರು ಲವ್ ಮಾಡಿದ್ದರು ಎನ್ನಲಾಗುತ್ತಿದೆ. ಜೊತೆಗೆ ವಸಿಷ್ಠ ಸಿಂಹ ಹರಿಪ್ರಿಯಾಗೋಸ್ಕರ ಆರ್ ಆರ್ ನಗರಕ್ಕೂ ಶಿಫ್ಟ್ ಆಗಿದ್ದಾರೆ ಎನ್ನಲಾಗುತ್ತಿದೆ.