Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜ.2 ರಿಂದ 11ರವರೆಗೆ ಸಮಗ್ರ ಸಮಾಜ ಪರಿವರ್ತನೆ ಸತ್ಯಾಗ್ರಹ : ಎಸ್.ಆರ್.ಹಿರೇಮಠ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ  ಕೃಪೆ
                          ಸುರೇಶ್ ಪಟ್ಟಣ್                                                   ಮೊ : 87220 22817

ಚಿತ್ರದುರ್ಗ,(ಡಿ.02) : ಜನಪರ, ರಾಜಕೀಯ ಸಾಮಾಜಿಕ, ಸಾಂಸ್ಕೃತಿಕ ಆರ್ಥಿಕ ನೀತಿಗಾಗಿ ಸಮಾಜವನ್ನು ಒಡೆದು ಆಳುವ ಜನ ವಿರೋಧಿ ಫ್ಯಾಸಿಸ್ಟ್ ಸರ್ಕಾರವನ್ನು ಕಿತ್ತೂಗೆಯುವುದಕ್ಕಾಗಿ ಜ, 2 ರಿಂದ ಜ. 11ರವರೆಗೆ ಕೂಡಲಸಂಗಮದಿಂದ ಬೆಂಗಳೂರಿನ ಫ್ರೀಡಂ ಪಾರ್ಕವರೆಗೂ ಸಮಗ್ರ ಸಮಾಜ ಪರಿವರ್ತನೆ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಜನಾಂದೋಲನಗಳ ಮಹಾ ಮೃತಿಯ ರಾಜ್ಯಧ್ಯಕ್ಷರಾದ ಎಸ್.ಆರ್.ಹಿರೇಮಠ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಇಂದಿನ ಸರ್ಕಾರಗಳು ಜನರನ್ನು ಆಳುವು ಬದಲು ಅವರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿದೆ ವಿನಾ ಕಾರಣ ಕಾನೂನುಗಳನ್ನು ಜಾರಿ ಮಾಡುವುದರ ಮೂಲಕ ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ.

ಪ್ರಜಾಪ್ರಭುತ್ವ ಹದಗೆಟ್ಟಿದೆ. ಸ್ವಾತಂತ್ರ್ಯ ನಂತರ ಗಡಾಂತರವನ್ನು ಎದುರಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. 70ರ ದಶಕದಲ್ಲಿ ಘೋಷಿತವಾದ ಕಪ್ಯೋ ಇತ್ತಿ ಈಗ ಅಘೋಷಿತವಾದ ಕರ್ಫೋ ಇದೆ ಸಂವಿಧಾನವನ್ನು ಅಳಿಸುವ ನಿಟ್ಟಿನಲ್ಲಿ ಕೆಲವರು ಕೆಲಸ ಮಾಡುತ್ತಿದ್ದಾರೆ ನಾವುಗಳು ಅದನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ರೈತ, ಮಹಿಳೆ, ದಲಿತ, ಕಾರ್ಮಿಕರಿಗೆ ಸ್ಥಾನ ಸಿಕ್ಕಿಲ್ಲ, ಇವರಿಗೆ ಸ್ವಾತಂತ್ರ್ಯ ಇನ್ನೂ ಮರಿಚಿಕೆಯಾಗಿದೆ. ಸರಿಯಾದ ರೀತಿಯಲ್ಲಿ ಗೌರವ ಸಿಕ್ಕಿಲ್ಲ, ಇವರ ಬದುಕು ಇನ್ನೂ ಹಸನು ಆಗಿಲ್ಲ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ವಾಪಾಸ್ಸ್ ಪಡೆದಿದರೆ ರಾಜ್ಯದಲ್ಲಿ ಇನ್ನೂ ಅದನ್ನು ವಾಪಾಸ್ಸ್ ಪಡೆದಿಲ್ಲ, ಇದನ್ನು ಜಾರಿಗೂಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ. ಇದರ ವಿರುದ್ದವಾಗಿ ಹೋರಾಟವನ್ನು ಮಾಡಲಾಗುತ್ತಿದೆ.

ಈ ಕರಾಳ ಕೃಷಿ ಮಸೂದೆ ರದ್ದಾಗಬೇಕಿದೆ, ಕನಿಷ್ಠ ಬೆಂಬಲ ಬೆಲೆ ಹಾಗೂ ಪ್ರೊಕ್ಯೂರ್‍ಮೆಂಟ್ ನೀತಿಗಳನ್ನು ಕಾಯಿದೆ ನಿಯಂತ್ರಿಸಬೇಕು. ಭೂಸ್ವಾಧೀನ ಎಂಬುದು ರೈತಾಪಿ ದೃಷ್ಟಿಯಿಂದ ಜೀವ ಜೀವ ವಿರೋಧಿ ಕ್ರಮವಾಗಿದೆ ಕನಿಷ್ಠ 2013ರ ಕಾಯಿದೆಗೆ ಬದ್ದವಾಗಿ ರಾಜ್ಯ ಸರ್ಕಾರ ಭೂಸ್ವಾಧೀನ ಕಾಯಿದೆ ರೂಪಿಸಬೇಕಿದೆ ಎಂದು ಒತ್ತಾಯಿಸಿದರು.

ದಲಿತರ ಮೇಲೆ ಹಲ್ಲೆ ಮತ್ತು ಅಶ್ಪøಶ್ಯತೆಯನ್ನು ಕಠಿಣ ಕ್ರಮಗಳಿಂದ ನಿಯಂತ್ರಿಸಬೇಕಿದೆ, ರೈತ ಮತ್ತು ಕಾರ್ಮಿಕರ ಬದುಕಿನಲ್ಲಿ ದಿವಾಳಿ ಎಬ್ಬಿಸುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರಗಳನ್ನು ನಿಯಂತ್ರಿಸಬೇಕಿದೆ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಪಠ್ಯವನ್ನು ಅಳವಡಿಸಬೇಕು, ಶಿಕ್ಷಣದ ಖಾಸಗೀಕರಣ ಮತ್ತು ಸಮಾಜದ ಕೋಮುವಾದೀಕರಣವನ್ನು ನಿಲ್ಲಿಸಬೇಕು, ಸಾರ್ವಜನಿಕ ಉದ್ದಿಮೆಗಳ ಮತ್ತು ಸಾರ್ವಜನಿಕ ಭೂಮಿಯ ಮಾರಾಟ ನಿಲ್ಲಬೇಕು, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕು ಎಂದು ಹಿರೇಮಠ ಆಗ್ರಹಿಸಿದರು.

ಪ್ರತಿ ಜಿಲ್ಲೆಯಲ್ಲಿ ಸಂಚಾರ ಮಾಡುವ ಯಾತ್ರೆಯೂ ನಗರದ ಒಳಗಡೆಯಲ್ಲಿ ಫಾದಯಾತ್ರೆಯ ಮೂಲಕ ಸಂಚಾರ ಮಾಡಿ ಅಲ್ಲಿನ ಅಂಬೇಡ್ಕರ್ ಅಥವಾ ಗಾಂಧೀಜಿಯವರ ಭಾವ ಚಿತ್ರಕ್ಕೆ ಹಾರ ಹಾಕಿ ಮೌನ ಮೆರವಣಿಗೆಯನ್ನು ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದರೊಂದಿಗೆ ಪ್ರತಿ ಜಿಲ್ಲೆಯಲ್ಲಿ ಸತ್ಯಾಗ್ರಹ ಸಮಿತಿಯನ್ನು ರಚನೆ ಮಾಡಲಾಗುವುದು.

ಇದು ಮುಂದಿನ ದಿನಮಾನದಲ್ಲಿ ನಡೆಯುವ ವಿವಿಧ ರೀತಿಯ ಸತ್ಯಾಗ್ರಹಕ್ಕೆ ಪೂರಕವಾಗಲಿದೆ. 2023ರ ರಾಜ್ಯ ಚುನಾವಣೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವ ಹೋಣೆಗಾರಿಕೆ ನಮ್ಮ ಮೇಲಿದೆ ಎಂದರು.
ಯತಿರಾಜ್ ಮಾತನಾಡಿ, ಈ ಯಾತ್ರೆಯೂ ನಾಲ್ಕು ಕಡೆಗಳಿಂದ ನಡೆಯಲಿದೆ.

ಜ. 2 ರಿಂದ ಕೂಡಲಸಂಗಮದಿಂದ ಪ್ರಾರಂಭವಾಗಿ ಜ. 11 ರಂದು ಬೆಂಗಳೂರನ್ನು ತಲುಪಲಿದೆ ಈ ಯಾತ್ರೆಯೂ ರೈತ, ಕೂಲಿಕಾರರ ಪರವಾಗಿ ನಡೆಯಲಿದೆ ಬಾಗಲಕೋಟೆ, ನರಗುಂದ,ನವಲಗುಂದ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕವಾಗಿ ಬೆಂಗಳೂರನ್ನು ತಲುಪಲಿದೆ.

ಎರಡನೇ ತಂಡ ಮಂಗಳೂರಿನಿಂದ ತುಮಕೂರವರೆಗೆ ನಡೆಯಲಿದ್ದು, ಸರ್ವ ಜನಾಂಗದ ಶಾಂತಿಯ ತೋಟದ ಕೇಂದ್ರಕೃತಿವಾಗಿ ನಡೆಯಲಿದೆ. ಮೂರನೇ ತಂಡವು ಕೋಲಾರದಿಂದ ತುಮಕೂರವರೆಗೆ ನಡೆಯಲಿದೆ.

ಸಂವಿಧಾನ ರಕ್ಷಣೆ ಕೇಂದ್ರೀಕೃತವಾಗಲಿದೆ. ನಾಲ್ಕನೇ ತಂಡವೂ ಕೂಸನೂರುನಿಂದ ದಾವಣಗೆರೆಯವರೆಗೆ ನಡೆಯಲಿದೆ. ಸಾಮೂಹಿಕ ಭೂಮಿ ಸಂರಕ್ಷಣೆಯನ್ನು ಕೇಂದ್ರಕರಿಸಲಾಗಿದೆ. ಜ. 11 ರಂದು ಬೆಂಗಳೂರಿನ ಫೀಡಂ ಪಾರ್ಕನಲ್ಲಿ ನಾಲ್ಕು ಕಡೆಯಿಂದ ಬಂದ ರ್ಯಾಲಿಗಳು ಸಮಾವೇಶಗೊಂಡು ಮುಕ್ತಾಯ ಸಮಾರಂಭವನ್ನು ನಡೆಸಲಾಗುವುದು ಎಂದರು.

ಗೋಷ್ಟಿಯಲ್ಲಿ ರೈತ ಸಂಘದ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶೀ ನುಲೇನೂರು ಶಂಕ್ರರಪ್ಪ, ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಸಿಪಿಐನ ಸುರೇಶ್ ಬಾಬು, ಸತ್ಯಕೀರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!