ಟೆಕ್ ಪ್ರತಿಭೆಗಳನ್ನು ಬ್ರಿಟನ್ ಗೆ ಆಹ್ವಾನಿಸಿದ ಪ್ರಧಾನಿ ರಿಷಿ ಸುನಕ್..!
ಬ್ರಿಟನ್: ಆರ್ಥಿಕ ಸಂಕಷ್ಟದಿಂದಾಗಿ ಲಿಜ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಿಷಿ ಸುನಕ್ ಬಹುಮತದೊಂದಿಗೆ ಬ್ರಿಟನ್ ಪ್ರಧಾನಿಯಾಗಿದ್ದಾರೆ. ದೇಶವನ್ನು ಆರ್ಥಿಕವಾಗಿ ಕಾಪಾಡುವ ಸವಾಲು ಈಗ ರಿಷಿ ಸುನಕ್ ಅವರ ಮೇಲಿದೆ. ಹೀಗಾಗಿ ಹೊಸ ಹೊಸ ಯೋಜನೆಗಳತ್ತ ರಿಷಿ ಸುನಕ್ ಯೋಚಿಸುತ್ತಿದ್ದಾರೆ.
ಇದೀಗ ರಿಷಿ ಸುನಕ್ ಟೆಕ್ ಪ್ರತಿಭೆಗಳನ್ನು ತಮ್ಮ ದೇಶಕ್ಕೆ ಆಹ್ವಾನ ಮಾಡಿದ್ದಾರೆ. ಪ್ರಪಂಚದಾದ್ಯಂತ ಯುಕೆಯನ್ನು ಟೆಕ್ ದೈತ್ಯನನ್ನಾಗಿ ಮಾಡಲು ಪ್ರಧಾನಿ ರಿಷಿ ಸುನಕ್ ಫ್ಲ್ಯಾನ್ ಮಾಡಿದ್ದಾರೆ. ವಿಶ್ವದ 100 ಅತ್ಯುತ್ತಮ ಯುವ ವೃತ್ತಿಪರರಿಗೆ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಹೊಸ ಟ್ಯಾಲೆಂಟ್ ನೇಮಕ ಮಾಡಿಕೊಳ್ಳಲು ಯುಕೆ ಅಭಿಯಾನ ಶುರು ಮಾಡಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿಷಿ ಸುನಕ್, ಬ್ರೆಕ್ಸಿಟ್ ನಂತರದ ವಲಸೆ ನಿಒತಿಯ ಮೇಲೆ ನಿಯಂತ್ರಣವು ನಿರ್ಣಾಯಕವಾಗಿದೆ. ವ್ಯಾಪಾರ ಮಾಲಿಕರು ಮತ್ತು ಹೆಚ್ಚು ಪ್ರತೊಭಾವಂತ ವ್ಯಕ್ತಿಗಳಿಗಾಗಿ ವಿಶ್ವದ ಅತ್ಯಂತ ಆಕರ್ಷಕ ವಲಸೆ ಕಾರ್ಯಕ್ರಮಗಳಲ್ಲಿ ಒಂದನ್ನು ಸ್ಥಾಪಿಸುವುದಾಗಿ ರಿಷಿ ಸುನಕ್ ಘೋಷಿಸಿದ್ದಾರೆ.