ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದ ಮುಂಭಾಗ ಹೂವು, ಹಾರ ಹಾಗೂ ಬಾಳೆಕಂದಿನಿಂದ ಅಲಂಕರಿಸಲಾಗಿತ್ತು. ಕಣಿವೆಮಾರಮ್ಮನನ್ನು ಬೃಹಧಾಕಾರವಾದ ಹಾರ ಹಾಗೂ ಆಭರಣಗಳಿಂದ ಸಿಂಗರಿಸಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿ.ವೈ.ಎಸ್ಪಿ. ಶ್ರೀಧರ್, ನಿವೃತ್ತ ಡಿ.ವೈ.ಎಸ್ಪಿ.ರುದ್ರಮುನಿ, ನಗರ ಠಾಣೆ ಇನ್ಸ್ಪಕ್ಟರ್ ತಿಪ್ಪೇಸ್ವಾಮಿ ಇವರುಗಳು ಕಾರ್ತಿಕೋತ್ಸವದಲ್ಲಿ ಭಾಗವಹಿಸಿ ಕಣಿವೆಮಾರಮ್ಮನ ದರ್ಶನ ಪಡೆದರು.
ಸಂಜೆಯಿಂದ ರಾತ್ರಿಯವರೆಗೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರದ್ದಾ ಭಕ್ತಿಯಿಂದ ಕಣಿವೆಮಾರಮ್ಮನಿಗೆ ಪೂಜೆ ಸಲ್ಲಿಸಿದರು.
ಸಾವಿರಾರು ದೀಪಗಳನ್ನು ಬೆಳಗಿ ಭಕ್ತರು ಕಾರ್ತಿಕೋತ್ಸವದಲ್ಲಿ ಸಂಭ್ರಮಿಸಿದರು. ಕೇಂದ್ರ ಸಚಿವರ ಆಪ್ತ ಸಹಾಯಕ ಮೋಹನ್, ಜಿ.ವಿ.ನಾಗೇಂದ್ರಪ್ರಸಾದ್, ಶ್ಯಾಂಸುಂದರ್ ಪ್ರಸಾದ್, ವೆಂಕಟೇಶ್, ನಾಗರಾಜ್, ಪೂಜಾರಿ ನಾಗೇಂದ್ರಪ್ಪ ಹಾಗೂ ದೇವಸ್ಥಾನದ ಭಕ್ತ ಮಂಡಳಿಯವರು ಕಾರ್ತಿಕೋತ್ಸವದಲ್ಲಿ ದ್ದರು.