ಬೆಂಗಳೂರು: ಮಂಡ್ಯ ಜಿಲ್ಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದೆ. ಕಳೆದ ಬಾರಿ ಕಮಲ ಅರಳಿಸಲು ಹೋದಾಗಲೂ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಹೇಗಾದರೂ ಮಾಡಿ ಕಮಲ ಅರಳಿಸಲೇಬೇಕೆಂದು ಬಿಜೆಪಿ ನಾಯಕರು ಪಣ ತೊಟ್ಟಂತೆ ಕಾಣುತ್ತಿದ್ದಾರೆ. ಅದರ ಪರಿಣಾಮವಾಗಿ ಬಿಜೆಪಿ ಆ್ಯಕ್ಟೀವ್ ಆಗಿದ್ದು, ಪ್ರಮುಖ ಮುಖಂಡರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.
ಇತ್ತಿಚೆಗಷ್ಟೇ ಸುಮಲತಾ ಆಪ್ತ ಇಂಡವಾಳು ಸಚ್ಚಿದಾನಂದ ಅವರು ಬಿಜೆಪಿ ಸೇರುವ ಬಗ್ಗೆ ಘೋಷಣೆ ಮಾಡಿದ್ದರು. ಆಗಲೇ ಸುಮಲತಾ ಕೂಡ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ದೊಡ್ಡ ಬೆಳವಣಿಗೆಯೇ ನಡೆದಿದ್ದು, ಸಚ್ಚಿದಾನಂದ ಜೊತೆಗೆ ಕಾಂಗ್ರೆಸ್ ನಿಂದ ಉಚ್ಛಾಟಿತರಾದ ನಾಯಕರೆಲ್ಲ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ, ಸಚಿವ ಅಶ್ವತ್ಥ್ ನಾರಾಯಣ್, ಗೋಪಾಲಯ್ಯ, ಸಿಪಿ ಯೋಗೀಶ್ವರ್ ಸಮ್ಮುಖದಲ್ಲಿ ಕಮಲವಿಡಿದು ಬಿಜೆಪಿ ಸೇರಿದ್ದಾರೆ. ಇನ್ನು ಸಚ್ಚಿದಾನಂದ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ನಿಮ.ದ ಉಚ್ಛಾಟಿತರಾಗಿದ್ದರು. ಅವರ ಜೊತೆಗೆ ಇನ್ನು ಹಲವು ಕಾರ್ಯಕರ್ತರು ಉಚ್ಛಾಟನೆಗೊಂಡುದ್ದರು.