ಗಾಂಧಿನಗರದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಚಾರ ಅಂದ್ರೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆಯಾಗುತ್ತಿದ್ದಾರೆ ಎಂಬುದು. ಇತ್ತಿಚೆಗೆ ಹರಿಪ್ರಿಯಾ ಚುಚ್ಚಿಸಿಕೊಂಡಿದ್ದ ಮೂಗುತ್ತಿ ಕೂಡ ಇದನ್ನೇ ಹೇಳುತ್ತಿದೆ ಎಂದು ಸುದ್ದಿಯಾಗುತ್ತಿದೆ. ಮದುವೆಗೂ ಮುನ್ನ ಮೂಗುತ್ತಿ ಚುಚ್ಚಿಸಿಕೊಳ್ಳುವ ಸಂಪ್ರದಾಯವಿರುವುದರಿಂದ ಮೂಗುತ್ತಿ ಚುಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈ ಇಬ್ಬರು ಚಿತ್ರರಂಗದಲ್ಲಿ ಬ್ಯುಸಿಯಾಗಿರುವವರೇ. ಆದ್ರೆ ಇಬ್ಬರಿಗೂ ಪರಿಚಯವಾಗಿದ್ದು ಎಲ್ಲಿ, ಯಾವಾಗ ಪ್ರೀತಿ ಆಯ್ತು ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತೆಲುಗಿನ ಎವರು ಸಿನಿಮಾ ಮಾಡುವಾಗ ಇಬ್ಬರು ಪರಿಚಯವಾಗಿದ್ದಾರೆ. ಬಳಿಕ ಪ್ರೀತಿಯಾಗಿದೆ ಎನ್ನಲಾಗಿದೆ.
ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಆದ್ರೆ ಸಿನಿಮಾದಲ್ಲಿ ನಟಿಸುವಾಗಲೇ ಇಬ್ಬರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಈಗ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಹರಿಪ್ರಿಯಾ ಕಡೆಯಿಂದಾಗಲೀ, ವಸಿಷ್ಠ ಸಿಂಹ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಬಂದಿಲ್ಲ.